ಕರ್ನಾಟಕ

karnataka

ETV Bharat / city

'ವೈದ್ಯಕೀಯ ಶಿಕ್ಷಣ ಮುಂದುವರೆಸಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡಬೇಕು' - ukraine russia war

ಇನ್ಮುಂದೆ ಉಕ್ರೇನ್​ಗೆ ಹೋಗಿ ಶಿಕ್ಷಣ ಮುಂದುವರಿಸುವ ವಾತಾವರಣ ಇಲ್ಲ. ಹಾಗಾಗಿ ಭಾರತ ಸರ್ಕಾರ ನಮಗೆ ಇಲ್ಲಿಯೇ ಎಂಬಿಬಿಎಸ್ ಮುಂದುವರೆಸಲು ಅವಕಾಶ ಮಾಡಿಕೊಡಬೇಕೆಂದು ಉಕ್ರೇನ್‌ನಿಂದ ಮರಳಿದ ಕಲಬುರಗಿಯ ವಿದ್ಯಾರ್ಥಿನಿ ಮನವಿ ಮಾಡಿದರು.

student
student

By

Published : Mar 8, 2022, 2:55 PM IST

ಕಲಬುರಗಿ:ಪೋಷಕರ ಆಸೆಯಂತೆ ವೈದ್ಯಳಾಗುವ ಕನಸು ಕಂಡಿದ್ದೆ. ಆದರೆ, ಇನ್ಮುಂದೆ ಉಕ್ರೇನ್​ಗೆ ಹೋಗಿ ಶಿಕ್ಷಣ ಮುಂದುವರಿಸುವ ವಾತಾವರಣ ಇಲ್ಲ. ವೈದ್ಯೆಯಾಗುವ ಕನಸು ಕಮರಿದೆ ಎಂದು ಉಕ್ರೇನ್​ನಿಂದ ಮರಳಿರುವ ವಿದ್ಯಾರ್ಥಿ ಪ್ರಿಯಾ ಪಾಟೀಲ್​ ಬೇಸರ ವ್ಯಕ್ತಪಡಿಸಿದ್ದಾರೆ.

ಉಕ್ರೇನ್ ಯುದ್ಧಭೂಮಿಯಿಂದ ಸುರಕ್ಷಿತವಾಗಿ ಬಂದಿರುವ ಕಾರಣ ಹಾಗೂ ಮಹಿಳಾ ದಿನಾಚರಣೆ ಪ್ರಯುಕ್ತ ಮಂಗಳವಾರ ಪ್ರಿಯಾ ಪಾಟೀಲ್‌ಗೆ ಜಿಲ್ಲಾ ವೀರಶೈವ ಸಮಾಜ, ಹಿಂದೂ ಜಾಗೃತಿ ಸೇನೆಯ ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಈ ವೇಳೆ ಮಾಧ್ಯಮದ ಮುಂದೆ ತನ್ನ ಅಳಲು ತೋಡಿಕೊಂಡ ಪ್ರಿಯಾ, ತಮ್ಮ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇನ್ಮುಂದೆ ಉಕ್ರೇನ್​ಗೆ ಹೋಗಿ ಶಿಕ್ಷಣ ಮುಂದುವರಿಸುವ ವಾತಾವರಣ ಇಲ್ಲ. ಹಾಗಾಗಿ ಭಾರತ ಸರ್ಕಾರ ನಮಗೆ ಇಲ್ಲಿಯೇ ಎಂಬಿಬಿಎಸ್ ಮುಂದುವರೆಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.


ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಎಂಬಿಬಿಎಸ್ 4ನೇ ಸೆಮಿಸ್ಟರ್ ಓದುತ್ತಿದ್ದ ಪ್ರಿಯಾ ಯುದ್ದ ಆರಂಭವಾದ ನಂತರ ಎರಡು ದಿನ ಮೆಟ್ರೋ ಸ್ಟೇಷನ್ ಮತ್ತು ಎಂಟು ದಿನ ಬಂಕರ್‌ನಲ್ಲಿ ಕಾಲ ಕಳೆದಿದ್ದರು. ಬಳಿಕ ಖಾರ್ಕಿವ್‌ನಿಂದ ಪೋಲೆಂಡ್‌ ಗಡಿವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿದ್ದರು. ಪೋಲೆಂಡ್ ಗಡಿಯಲ್ಲಿ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ಸಹಾಯದಿಂದ ಭಾರತಕ್ಕೆ ಆಗಮಿಸಿದ್ದಾರೆ‌.

ಇದನ್ನೂ ಓದಿ:'ಪಕ್ಕದಲ್ಲೇ ಬಾಂಬ್ ಸ್ಫೋಟ ಆಯ್ತು, ಓಡಿ ಪ್ರಾಣ ಉಳಿಸಿಕೊಂಡೆ': ಭೀಕರತೆ ಬಿಚ್ಚಿಟ್ಟ ಕಲಬುರಗಿ ಯುವತಿ

ABOUT THE AUTHOR

...view details