ಕಲಬುರಗಿ: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಭಾರತದಾದ್ಯಂತ ಲಾಕ್ಡೌನ್ ಘೋಷಿಸಿದ್ರೂ ನಗರದಲ್ಲಿ ಮಾತ್ರ ವಾಹನ ಸಂಚಾರಕ್ಕೆ ಬ್ರೇಕ್ ಬಿದ್ದಿಲ್ಲ. ನಗರದ ವಿವಿಧೆಡೆ ಅನಗತ್ಯವಾಗಿ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದ್ದು, ಅಂಥವರ ವಾಹನಗಳನ್ನು ಜಪ್ತಿ ಮಾಡೋ ಕಾರ್ಯವನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.
ಲಾಕ್ಡೌನ್ ನಿಯಮ ಉಲ್ಲಂಘನೆ: ಒಂದೇ ದಿನ 120 ವಾಹನ ಜಪ್ತಿ ಮಾಡಿದ ಕಲಬುರಗಿ ಪೊಲೀಸರು - ಕೊರೊನಾ ವೈರಸ್
ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇತ್ತ ಅನಗತ್ಯವಾಗಿ ಸಂಚಾರ ಮಾಡುತ್ತಿದ್ದ ವಾಹನಗಳಿಗೆ ಕಡಿವಾಣ ಹಾಕುತ್ತಿರುವ ಕಲಬುರಗಿ ಸಂಚಾರಿ ಪೊಲೀಸರು, ಅನಗತ್ಯವಾಗಿ ತಿರುಗಾಡುತ್ತಿರುವ ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ.
ಕಲಬುರಗಿ ಪೊಲೀಸ್
ನಗರದ ಹಾಗರಗಾ ರಸ್ತೆಯಲ್ಲಿ 15ಕ್ಕೂ ಹೆಚ್ಚು ಬೈಕ್ಗಳನ್ನು ಜಪ್ತಿ ಮಾಡಲಾಗಿದೆ. ಸೂಪರ್ ಮಾರುಕಟ್ಟೆಯಲ್ಲಿಯೂ ಕಾರು ಮತ್ತು ಬೈಕ್ಗಳನ್ನು ಜಪ್ತಿ ಮಾಡಲಾಗಿದೆ. ಅನಗತ್ಯವಾಗಿ ರಸ್ತೆ ಮೇಲೆ ಸಂಚರಿಸುವವರಿಗೆ ಪೊಲೀಸರು ವಾಹನ ಜಪ್ತಿ ಶಿಕ್ಷೆ ನೀಡಿದ್ದಾರೆ. ಜಪ್ತಿ ಮಾಡಿದ ಬೈಕ್ಗಳನ್ನು ಟ್ರಕ್ಗಳ ಮೂಲಕ ಸ್ಥಳಾಂತರಿಸಿದ್ದಾರೆ.
ಮೊನ್ನೆ ಒಂದೇ ದಿನ 120 ವಾಹನ ಜಪ್ತಿ ಮಾಡಿದ್ದ ಟ್ರಾಫಿಕ್ ಪೊಲೀಸರು, ಇಂದೂ ಸಹ ಕಾರ್ಯಾಚರಣೆ ಮುಂದುವರೆಸಿದ್ದಾರೆ.