ಕಲಬುರಗಿ:ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ವಿರುದ್ಧ ಯುವತಿ ಆರೋಪ ಪ್ರಕರಣಕ್ಕೆ ಸಂಬಂಧ ನಗರ ಪೊಲೀಸ್ ಆಯುಕ್ತ ಎನ್. ರವಿಕುಮಾರ ಪ್ರತಿಕ್ರಿಯೆ ನೀಡಿದ್ದು, ದೆಹಲಿ ಮೂಲದ ಯುವತಿ ತಮ್ಮನ್ನು ಭೇಟಿಯಾಗಿದ್ದಳು, ಆದ್ರೆ ದೂರು ದಾಖಲಿಸಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.
ದೆಹಲಿ ಮೂಲದ ಯುವತಿ ತಮ್ಮ ಪೋಷಕರ ಜೊತೆ 3 ದಿನಗಳ ಹಿಂದೆ ಕಲಬುರಗಿಗೆ ಬಂದು ತಮ್ಮನ್ನು ಭೇಟಿಯಾಗಿದ್ದಳು. ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ನನಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಮೌಖಿಕವಾಗಿ ಹೇಳಿದ್ದರು. ಆ ಯುವತಿಯಾಗಲಿ, ಕುಟುಂಬದವರಾಗಲಿ ಯಾವುದೇ ದೂರು ನೀಡಿಲ್ಲ. ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಅವರೇ ನಮ್ಮ ಸೈಬರ್ ಸೆಲ್‌ಗೆ ದೂರು ನೀಡಿದ್ದಾರೆ ಎಂದು ಆಯುಕ್ತರು ವಿವರಿಸಿದ್ದಾರೆ.