ಕರ್ನಾಟಕ

karnataka

ETV Bharat / city

ಚಾಲಾಕಿ ಮೊಬೈಲ್​ ಕಳ್ಳನ ಬಂಧನ - ಮೊಬೈಲ್​ ಕಳ್ಳನ ಬಂಧನ

ಪ್ರವೀಣ್ ತಾರಾಸಿಂಗ್ (21) ಬಂಧಿತ ಆರೋಪಿ. ರಾಮ ಮಂದಿರ ಬಳಿ ಕದ್ದ ಮೊಬೈಲ್ ಮಾರಾಟ ಮಾಡುತ್ತಿರುವ ವೇಳೆ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಸಿದ್ದರಾಮೇಶ್ವರ್ ಗಡೇದ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

kalaburagi mobile thief arrested
ಚಾಲಾಕಿ ಮೊಬೈಲ್​ ಕಳ್ಳನ ಬಂಧನ

By

Published : Feb 2, 2021, 9:04 PM IST

ಕಲಬುರಗಿ: ಮೊಬೈಲ್ ಕಳ್ಳತವನ್ನೇ ವೃತ್ತಿಯಾಗಿಸಿಕೊಂಡಿದ್ದ ಚಾಲಾಕಿ ಕಳ್ಳನನ್ನು ಬಂಧಿಸಿ ಜೈಲಿಗಟ್ಟುವಲ್ಲಿ ನಗರದ ಸ್ಟೇಷನ್ ಬಜಾರ್ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಐವನ್ ಶಾಹಿ ಬಳಿ ಮದೀನಾ ಕಾಂಪ್ಲೆಕ್ಸ್​ನಲ್ಲಿ 7 ಮೊಬೈಲ್ ಕಳ್ಳತನವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿದ ಪೊಲೀಸರು, 3 ಮೊಬೈಲ್ ಫೋನ್​ ಜಪ್ತಿ ಮಾಡಿಕೊಂಡಿದ್ದಾರೆ.

ಪ್ರವೀಣ್ ತಾರಾಸಿಂಗ್ (21) ಬಂಧಿತ ಆರೋಪಿ. ರಾಮ ಮಂದಿರ ಬಳಿ ಕದ್ದ ಮೊಬೈಲ್ ಮಾರಾಟ ಮಾಡುತ್ತಿರುವ ವೇಳೆ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಸಿದ್ದರಾಮೇಶ್ವರ್ ಗಡೇದ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

ABOUT THE AUTHOR

...view details