ಕರ್ನಾಟಕ

karnataka

ETV Bharat / city

ಸ್ವರಾಜ್ಯಕ್ಕೆ ಕಳುಹಿಸಿ ಕೊಡುವಂತೆ ಕಲಬುರಗಿ ವಲಸೆ ಕಾರ್ಮಿಕರ ಮನವಿ

ವಿವಿಧ ರಾಜ್ಯಗಳಿಂದ ಬಂದು ಕಲಬುರಗಿಯ ಚಿತ್ರಾಪುರ ತಾಲೂಕಿನ ವಾಡಿ ಎಸಿಸಿ ಸಿಮೆಂಟ್​ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಲಸೆ ಕಾರ್ಮಿಕರು, ತಮ್ಮನ್ನು ತಮ್ಮ ರಾಜ್ಯಗಳಿಗೆ ಕಳುಹಿಸಿ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

kalaburagi-migrant-worker-request-send-them-to-there-state
ಕಲಬುರಗಿ ವಲಸೆ ಕಾರ್ಮಿಕರ ಮನವಿ

By

Published : May 3, 2020, 11:23 AM IST

ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಎಸಿಸಿ ಸಿಮೆಂಟ್​ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದ 250 ಕ್ಕೂ ಹೆಚ್ಚು ಅಂತಾರಾಜ್ಯ ಕಾರ್ಮಿಕರು ತಮ್ಮನ್ನು ತವರು ರಾಜ್ಯಕ್ಕೆ ಕಳುಹಿಸಿಕೊಡುವಂತೆ ಅಂಗಲಾಚುತ್ತಿದ್ದಾರೆ.

ಸರ್ಕಾರ ನಮಗೆ ತೊಂದರೆ ನೀಡಿಲ್ಲ. ಆದರೆ ನಮ್ಮನ್ನೇ ನಂಬಿಕೊಂಡು ಊರಲ್ಲಿರುವ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ದಯವಿಟ್ಟು ನಮ್ಮೂರಿಗೆ ಕಳಿಸಿಕೊಡಿ ಎಂದು ಗುಜರಾತ್, ಬಿಹಾರ, ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ ಹಾಗೂ ಹಲವು ರಾಜ್ಯಗಳಿಂದ ಬಂದ ಕಾರ್ಮಿಕರು ಮನವಿ ಮಾಡಿದ್ದಾರೆ.

ಸ್ವರಾಜ್ಯಕ್ಕೆ ಕಳುಹಿಸಿ ಕೊಡುವಂತೆ ಕಲಬುರಗಿ ವಲಸೆ ಕಾರ್ಮಿಕರ ಮನವಿ

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಒಂದುವರೆ ತಿಂಗಳಿನಿಂದ ಕಂಪನಿ ಉತ್ಪಾದನೆ ನಿಲ್ಲಿಸಿದೆ. ಹೀಗಾಗಿ ಕಾರ್ಮಿಕರಿಗೆ ಕೆಲಸವಿಲ್ಲ, ಕೈಯಲ್ಲಿ ಹಣವೂ ಇಲ್ಲ. ಇದರಿಂದ ಊರಲ್ಲಿರುವ ಕುಟುಂಬದವರು ವನವಾಸ ಅನುಭವಿಸುತ್ತಿದ್ದಾರೆ. ಸದ್ಯ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರ ಸಂಚಾರಕ್ಕೆ ಅನುಮತಿ ನೀಡಿದ್ದು, ಹೇಗಾದರೂ ಮಾಡಿ ತಮ್ಮೂರು ಸೇರುವ ತವಕದಲ್ಲಿ ಕಾರ್ಮಿಕರಿದ್ದಾರೆ.

ಕರ್ನಾಟಕ ಸರ್ಕಾರ ಹಾಗೂ ನಮ್ಮ ರಾಜ್ಯದ ಸರ್ಕಾರ ಜಂಟಿಯಾಗಿ ನಮ್ಮೂರಿಗೆ ನಮ್ಮನ್ನು ಸೇರಿಸಲು ನೇರವಿಗೆ ಬರಲಿ ಎಂದು ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಈ ಬಗ್ಗೆ ಗಮನ ಹರಿಸಬೇಕಿದೆ.

ABOUT THE AUTHOR

...view details