ಕರ್ನಾಟಕ

karnataka

ETV Bharat / city

ಪಿಎಸ್ಐ ಹಗರಣದಲ್ಲಿ ಸದ್ದು ಮಾಡಿದ ಕಲಬುರಗಿ ಜ್ಞಾನಜ್ಯೋತಿ ಶಾಲೆಯಲ್ಲೀಗ ಚಿಣ್ಣರ ಕಲರವ - psi scam case

ಕಲಬುರಗಿ ಜ್ಞಾನಜ್ಯೋತಿ ಶಾಲೆ ಪ್ರತಿ ವರ್ಷದಂತೆ ತನ್ನ ಕಾರ್ಯಚಟುವಟಿಕೆಯನ್ನು ಅರಂಭಿಸಿದೆ.

Jyana jyoti school begins
ಜ್ಞಾನಜ್ಯೋತಿ ಶಾಲೆ ಆರಂಭ

By

Published : May 19, 2022, 11:46 AM IST

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ರಾಜ್ಯದ ಗಮನ ಸೆಳೆದ ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯ ಅಂಗಳದಲ್ಲೀಗ ಚಿಣ್ಣರ ಕಲರವ ಆರಂಭವಾಗಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ತರಗತಿಗಳು ಪುನರಾರಂಭಗೊಂಡಿದ್ದು, ಶಾಲೆ ಆರಂಭವಾಗುತ್ತೋ ಇಲ್ಲವೋ ಎಂದುಕೊಂಡಿದ್ದ ಪೋಷಕರ ಆತಂಕ ದೂರವಾಗಿದೆ.

ನಗರದ ಗೋಕುಲ ಬಡಾವಣೆಯಲ್ಲಿರುವ ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಕಳೆದ ವರ್ಷ ಅಕ್ಟೋಬರ್ 3ರಂದು ನಡೆದಿದ್ದ ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. ಇದೇ ವಿಷಯಕ್ಕೆ ಜ್ಞಾನಜ್ಯೋತಿ ಶಾಲೆ ರಾಜ್ಯದ ಗಮನ ಸೆಳೆದಿದೆ. ಅಕ್ರಮದ ಕೇಂದ್ರ ಬಿಂದು ಎಂದು ಬಿಂಬಿತವಾದ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆಯೀಗ ತನ್ನ ಕಾರ್ಯಚಟುವಟಿಕೆಗಳನ್ನು ಶುರು ಮಾಡಿದೆ. ಕಳೆದ ಒಂದೂವರೆ ತಿಂಗಳಿನಿಂದ ಕೇವಲ ಪೊಲೀಸ್, ಸಿಐಡಿ ಅಧಿಕಾರಿಗಳು ಹಾಗೂ ಆರೋಪಿಗಳ ಸದ್ದು ಕೇಳಿಬರುತ್ತಿದ್ದ ಜ್ಞಾನಜ್ಯೋತಿ ಶಾಲೆ ಅಂಗಳದಲ್ಲೀಗ ಮಕ್ಕಳ ಕಲರವ ಕೇಳಿ ಬರುತ್ತಿದೆ.

ಜ್ಞಾನಜ್ಯೋತಿ ಶಾಲೆ ಆರಂಭ

ಅನ್ನಪೂರ್ಣ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್​ ಅಡಿಯಲ್ಲಿ ಕಳೆದ 12 ವರ್ಷಗಳ ಹಿಂದೆ ಜ್ಞಾನಜ್ಯೋತಿ ಶಾಲೆ ಆರಂಭಗೊಂಡಿದ್ದು, ಸಾಕಷ್ಟು ಮಕ್ಕಳಿಗೆ ಜ್ಞಾನಕೇಂದ್ರವಾಗಿದೆ. ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ಶುಲ್ಕ ಸೇರಿದಂತೆ ಇನ್ನಿತರೆ ವಿಚಾರದಲ್ಲಿ ಪೋಷಕರ ಪರ ನೀತಿ ಅಳವಡಿಸಿಕೊಂಡಿದ್ದರಿಂದ ಸಾಕಷ್ಟು ಕುಟುಂಬಗಳ ಪ್ರೀತಿಗೂ ಜ್ಞಾನಜ್ಯೋತಿ ಶಾಲೆ ಪಾತ್ರವಾಗಿದೆ.‌ ಬಡ ಮತ್ತು ಮಧ್ಯಮ ವರ್ಗದ ಜನರು ಕೂಡ ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಆದ್ಯತೆ ನೀಡುತ್ತಾರೆ. ಸದ್ಯ 50ಕ್ಕೂ ಅಧಿಕ ಪ್ರವೇಶಾತಿಗಳು ಬಂದಿವೆ ಅಂತಾ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಸಂತೋಷ್ ತಿಳಿಸಿದ್ದಾರೆ.‌

ಇದನ್ನೂ ಓದಿ:ಪೆಟ್ರೋಲ್, ಡೀಸೆಲ್ ಸ್ಥಿರ: ಪ್ರಮುಖ ನಗರಗಳ ಇಂದಿನ ದರ ಹೀಗಿದೆ..

ABOUT THE AUTHOR

...view details