ಕರ್ನಾಟಕ

karnataka

ETV Bharat / city

ಕರ್ತವ್ಯಲೋಪ ಆರೋಪದಡಿ ಆಳಂದ ತಾಲೂಕಿನ ಮೂವರು ಶಿಕ್ಷಕರು ಅಮಾನತು - ಕರ್ತವ್ಯ ಲೋಪದಡಿ ಮೂವರು ಶಿಕ್ಷಕರ ಅಮಾನತ್ತು

ಕಲಬುರಗಿಯ ಆಳಂದ ತಾಲೂಕಿನ ಓರ್ವ ಶಿಕ್ಷಕಿ ಮತ್ತು ಇಬ್ಬರು ಶಿಕ್ಷಕರನ್ನು ಕರ್ತವ್ಯಲೋಪ ಹಾಗೂ ಅವ್ಯವಹಾರ ಆರೋಪದಡಿ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ..

Kalaburagi district alanda taluku Three teachers suspended for defamation
ಕರ್ತವ್ಯಲೋಪ ಆರೋಪದಡಿ ಆಳಂದ ತಾಲೂಕಿನ ಮೂವರು ಶಿಕ್ಷಕರು ಅಮಾನತ್ತು

By

Published : May 13, 2022, 5:23 PM IST

ಕಲಬುರಗಿ :ಕರ್ತವ್ಯಲೋಪ ಹಾಗೂ ಅವ್ಯವಹಾರ ಆರೋಪದಡಿ ಆಳಂದ ತಾಲೂಕಿನಲ್ಲಿ ಓರ್ವ ಶಿಕ್ಷಕಿ ಮತ್ತು ಇಬ್ಬರು ಶಿಕ್ಷಕರನ್ನ ಸೇವೆಯಿಂದ ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ್ ಬಜಂತ್ರಿ ಆದೇಶ ಹೊಡೆಸಿದ್ದಾರೆ. ಆಳಂದ ತಾಲೂಕು ಅಂಬೆವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಅಬ್ದುಲ್ ರಜಾಕ್, ಪ್ರಭಾರಿ ಮುಖ್ಯ ಶಿಕ್ಷಕ ಜಹೀರ್ ಅಬ್ಬಾಸ್ ಹಾಗೂ ಖಜೂರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವೀರಮ್ಮ ಈ ಮೂರು ಜನರನ್ನ ಅಮಾನತ್ತುಗೊಳಿಸಿ ಡಿಡಿಪಿಐ ಆದೇಶ ನೀಡಿದ್ದಾರೆ.

ಖಜೂರಿಯ ಮುಖ್ಯ ಶಿಕ್ಷಕಿ ವೀರಮ್ಮ, ಸರ್ಕಾರದ ಮಹತ್ತರ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿ, ಇವರ ಮೇಲೆ ಕರ್ತವ್ಯ ನಿರ್ಲಕ್ಷ್ಯತೆ ಅಂಶಗಳ ಆಧಾರದ ಮೇರೆಗೆ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ವೀರಮ್ಮ ವಿರುದ್ಧ 'ನಮ್ಮ ಕರುನಾಡು ರಕ್ಷಣಾ ವೇದಿಕೆ' ಜಿಲ್ಲಾಧ್ಯಕ್ಷ ಗಂಗಾಧರ ಕುಂಬಾರ, 'ಜಯ ಕರ್ನಾಟಕ ಜನಪರ ವೇದಿಕೆ' ಜಿಲ್ಲಾಧ್ಯಕ್ಷ ಬಸವರಾಜ ಎಸ್‌. ಕೊರಳ್ಳಿ ನೀಡಿದ ದೂರಿನ ಹಿನ್ನೆಲೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ವಿಚಾರಣೆ ನಡೆಸಿ ಶಿಕ್ಷಣಾಧಿಕಾರಿಗೆ ಸಲ್ಲಿಸಿದ ವರದಿ ಅನ್ವಯ ವೀರಮ್ಮ ಅವರನ್ನು ಡಿಡಿಪಿಐ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಅಂಬೇವಾಡ ಶಾಲೆಯ ಸಹ ಶಿಕ್ಷಕ ಅಬ್ದುಲ್‌ ರಜಾಕ್‌, ಪ್ರಭಾರಿ ಮುಖ್ಯ ಶಿಕ್ಷಕ ಜಹೀರ್‌ ಅಬ್ಬಾಸ್‌ ವಿರುದ್ಧ ಕರ್ತವ್ಯಲೋಪ ಆರೋಪ ಮಾಡಿ ಶಾಸಕ ಸುಭಾಷ್ ಗುತ್ತೇದಾರ್ ದೂರು ನೀಡಿದ್ದರು. ದೂರಿನನ್ವಯ ಶಿಕ್ಷಣ ಸಂಯೋಜಕರು, ಕ್ಷೇತ್ರ ಬಿಆರ್‌ಪಿ, ಸಿಆರ್‌ಪಿ ವರದಿ ನೀಡಿದ್ದರು. ವರದಿಗಳನ್ನು ಕ್ರೋಢೀಕರಿಸಿ ಪರಿಶೀಲಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ್ ದೇಗುಲಮಡಿ, ಡಿಡಿಪಿಐ ಅವರಿಗೆ ತಮ್ಮ ವರದಿ ಸಲ್ಲಿಸಿದರು. ವರದಿಯನ್ವಯ ಇಬ್ಬರು ಶಿಕ್ಷಕರನ್ನು ಡಿಡಿಪಿಐ ಅಶೋಕ್ ಭಜಂತ್ರಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ:ಪಕ್ಷದಲ್ಲಿ ರಮ್ಯಾ ಸ್ಥಾನಮಾನ ಏನೆಂಬುದು ನನಗೆ ಗೊತ್ತಿಲ್ಲ: ನಲಪಾಡ್

ABOUT THE AUTHOR

...view details