ಕರ್ನಾಟಕ

karnataka

ETV Bharat / city

ಗ್ರಾಪಂ ಚುನಾವಣೆಗೆ ಕಲಬುರಗಿ ಜಿಲ್ಲಾಡಳಿತದಿಂದ ಸಿದ್ಧತೆ: ಮತಗಟ್ಟೆಗಳತ್ತ ಮತ ಪೆಟ್ಟಿಗೆ ರವಾನೆ

ಕಲಬುರಗಿ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯತ್​​ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದ ಮತದಾನ ಪ್ರಕ್ರಿಯೆ ನಾಳೆ ನಡೆಯಲಿದೆ. ಮೊದಲ ಹಂತದಲ್ಲಿ 126 ಗ್ರಾಮ ಪಂಚಾಯಯತ್​​ಗಳಿಗೆ ಮತದಾನ ಜರುಗಲಿದೆ. ಎರಡನೇ ಹಂತದಲ್ಲಿ 116 ಗ್ರಾಮ ಪಂಚಾಯತ್​ಗಳ ಚುನಾವಣೆ ನಡೆಯಲಿದೆ.

kalaburagi-district-administration-ready-for-grama-panchayat-election
ಕಲಬುರಗಿ ಜಿಲ್ಲಾಡಳಿತ

By

Published : Dec 21, 2020, 3:19 PM IST

ಕಲಬುರಗಿ:ನಾಳೆ ನಡೆಯಲಿರುವ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸುತ್ತಿದೆ. ಚುನಾವಣಾ ಸಿಬ್ಬಂದಿ ಮತ ಪೆಟ್ಟಿಗೆಗಳೊಂದಿಗೆ ಮತಗಟ್ಟೆಗಳತ್ತ ಮುಖ ಮಾಡಿದ್ದಾರೆ.

ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯತ್​ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದ ಮತದಾನ ಪ್ರಕ್ರಿಯೆ ನಾಳೆ ನಡೆಯಲಿದೆ. ಮೊದಲ ಹಂತದಲ್ಲಿ 126 ಗ್ರಾಮ ಪಂಚಾಯತ್​ಗಳ ಚುನಾವಣೆ ಜರುಗಲಿದೆ. ಎರಡನೇ ಹಂತದಲ್ಲಿ 116 ಗ್ರಾಮ ಪಂಚಾಯತ್​ಗಳಿಗೆ ಚುನಾವಣೆ ನಡೆಯಲಿದೆ.

ಓದಿ-ಸಿದ್ದರಾಮಯ್ಯ ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದಿರಬೇಕು: ಹೆಚ್​ಡಿಕೆ

ಮೊದಲ ಹಂತದಲ್ಲಿ ಕಲಬುರಗಿ, ಆಳಂದ, ಅಫಜಲಪುರ, ಕಮಲಾಪುರ, ಕಾಳಗಿ ಹಾಗೂ ಶಹಾಬಾದ್ ತಾಲೂಕುಗಳಲ್ಲಿ ಮತದಾನ ನಡೆಯುತ್ತದೆ. ಜಿಲ್ಲೆಯಲ್ಲಿ ಒಟ್ಟು 13,26,400 ಮತದಾರರಿದ್ದು, ಇದರಲ್ಲಿ ಪುರುಷರು-6,76,421 ಹಾಗೂ ಮಹಿಳೆಯರು-6,49,872 ಮತ್ತು ಇತರೆ-107 ಮತದಾರರಿದ್ದಾರೆ.

ಗ್ರಾಪಂ ಚುನಾವಣೆಗೆ ಕಲಬುರಗಿ ಜಿಲ್ಲಾಡಳಿತದಿಂದ ಸಿದ್ಧತೆ

2096 ಸದಸ್ಯ ಸ್ಥಾನಗಳಿಗೆ ನಾಳೆ ಮತದಾನ

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೀತಿರೋ ಗ್ರಾಮ ಪಂಚಾಯತ್​​ಗಳಲ್ಲಿ ಒಟ್ಟು 141 ಅಭ್ಯರ್ಥಿಗಳ ಅವಿರೋಧ ಆಯ್ಕೆಯಾಗಿದೆ. ಉಳಿದಂತೆ 2096 ಸದಸ್ಯ ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

ನಾಳೆ ಮತದಾನ ಪ್ರಕ್ರಿಯೆ ನಡೆಯುತ್ತಿರೋ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಆಯಾ ತಾಲೂಕು ಕೇಂದ್ರಗಳಿಂದ ವಿವಿಧ ಮತಗಟ್ಟೆಗಳಿಗೆ ಮತ ಪೆಟ್ಟಿಗೆಗಳನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಮತಗಟ್ಟೆಯ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ABOUT THE AUTHOR

...view details