ಕರ್ನಾಟಕ

karnataka

By

Published : Apr 10, 2021, 7:19 PM IST

ETV Bharat / city

ಕಲಬುರಗಿ ನೈಟ್​ ಕರ್ಫ್ಯೂಗೆ ಡಿಸಿ ನೇತೃತ್ವದಲ್ಲಿ ತಯಾರಿ

ನೈಟ್ ಕರ್ಫ್ಯೂ ಹಿನ್ನೆಲೆ ನಗರದಲ್ಲಿ ಪೊಲೀಸರ ಜೊತೆ 100 ಹೋಮ್ ಗಾರ್ಡ್ ಸಿಬ್ಬಂದಿ ನಿಯೋಜಿಸಲಾಗಿದೆ. ಅಗತ್ಯ ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಹೊರೆತುಪಡಿಸಿ ಇನ್ನಿತರ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನ ಬಂದ್‌ ಮಾಡುವಂತೆ ಡಿಸಿ ಸೂಚಿಸಿದ್ದಾರೆ..

ಕಲಬುರಗಿ ನೈಟ್​ ಕರ್ಫ್ಯೂ
ಕಲಬುರಗಿ ನೈಟ್​ ಕರ್ಫ್ಯೂ

ಕಲಬುರಗಿ :ನಗರದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆ ಜಿಲ್ಲಾಧಿಕಾರಿ ವಿ ವಿ ಜೋತ್ಸ್ಯಾಅವರು ನಗರ ಪೊಲೀಸರೊಂದಿಗೆ ಸಭೆ ನಡೆಸಿ ಸಿದ್ಧತೆ ಕೈಗೊಳ್ಳುತ್ತಿದ್ದಾರೆ.

ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಿ ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆ ನಗರ‌ ಪೊಲೀಸ್ ಆಯುಕ್ತ ಎನ್‌ ಸತೀಶ್ ‌ಕುಮಾರ್ ಮತ್ತು ಡಿಸಿಪಿ ಕಿಶೋರ್ ಬಾಬುರೊಂದಿಗೆ ಡಿಸಿ ಸಭೆ ನಡೆಸಿದರು‌.

ರಾತ್ರಿ 10ರ ನಂತರ ಓಡಾಡಿದ್ರೆ, ಗುಂಪು ಕಟ್ಟಿಕೊಂಡು ಕುಳಿತರೆ ಕಠಿಣ ಕ್ರಮದ ಕೈಗೊಳ್ಳಲಾಗುವುದು. ಪೊಲೀಸರಿಂದ ನಗರದ ಜಗತ್ ಸರ್ಕಲ್, ಸೂಪರ್ ಮಾರ್ಕೆಟ್, ಹಾಗರಾಗ ಕ್ರಾಸ್, ರಾಮ ಮಂದಿರ, ಕೇಂದ್ರ ಬಸ್ ನಿಲ್ದಾಣ ಪ್ರದೇಶ ಸೇರಿ ಪ್ರಮುಖ ವೃತ್ತಗಳಲ್ಲಿ ನೈಟ್​ ಸ್ಪೆಷಲ್ ಡ್ರೈವ್ ಕೈಗೊಳ್ಳಲಾಗುವುದು.

ನೈಟ್ ಕರ್ಫ್ಯೂ ಹಿನ್ನೆಲೆ ನಗರದಲ್ಲಿ ಪೊಲೀಸರ ಜೊತೆ 100 ಹೋಮ್ ಗಾರ್ಡ್ ಸಿಬ್ಬಂದಿ ನಿಯೋಜಿಸಲಾಗಿದೆ. ಅಗತ್ಯ ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಹೊರೆತುಪಡಿಸಿ ಇನ್ನಿತರ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನ ಬಂದ್‌ ಮಾಡುವಂತೆ ಡಿಸಿ ಸೂಚಿಸಿದ್ದಾರೆ.

ABOUT THE AUTHOR

...view details