ಕಲಬುರಗಿ : ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಇಂದು ಇಬ್ಬರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 190ಕ್ಕೆ ಏರಿಕೆಯಾಗಿದೆ.
ಕೊರೊನಾಗೆ ಇಬ್ಬರು ವೃದ್ಧರು ಬಲಿ: ಕಲಬುರಗಿಯಲ್ಲಿಂದು 203 ಕೋವಿಡ್ ಸೋಂಕಿತರು ಪತ್ತೆ - ಕೋವಿಡ್-19
ಕಲಬುರಗಿ ಜಿಲ್ಲೆಯಲ್ಲಿ ಇಂದು 203 ಜನ ಕೊರೊನಾ ಸೋಂಕಿತರ ಪತ್ತೆಯಾಗಿದ್ದು, ಇಬ್ಬರು ವೃದ್ಧ ಸೋಂಕಿತರು ಕೋವಿಡ್ಗೆ ಬಲಿಯಾಗಿದ್ದಾರೆ.
ಕೊರೊನಾ ವೈರಸ್
74 ಹಾಗೂ 76 ವರ್ಷದ ಇಬ್ಬರು ವೃದ್ಧರು ಸಾವಿಗೀಡಾಗಿದ್ದಾರೆ. ಅಲ್ಲದೆ, ಇಂದು 203 ಜನರಿಗೆ ಸೋಂಕು ದೃಢಪಟ್ಟಿದೆ. 10 ಸಾವಿರ ಗಡಿ ದಾಟಿದೆ ಸೋಂಕಿತರ ಸಂಖ್ಯೆ.
ಜಿಲ್ಲೆಯಲ್ಲಿ ಈವರೆಗೆ 10,142 ಜನರಿಗೆ ಸೋಂಕು ದೃಢಪಟ್ಟಿದೆ. ಇಂದು 215 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ಗುಣಮುಖರಾದವರ ಸಂಖ್ಯೆ 8,128ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 1,824 ಆ್ಯಕ್ಟಿವ್ ಪ್ರಕರಣಗಳಿವೆ.