ಕಲಬುರಗಿ:ವಶಕ್ಕೆ ಪಡೆದಿರುವ ಪಡಿತರ ಅಕ್ಕಿ ಹಾಗೂ ವಾಹನ ಬಿಡುಗಡೆಗೊಳಿಸಲುಜಿಲ್ಲೆಯಆಹಾರ ಇಲಾಖೆ ಜಂಟಿ ನಿರ್ದೇಶಕ (ಜೆಡಿ) ಶ್ರೀಧರ್ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಲಂಚ ಪಡೆಯುವಾಗ ಆಹಾರ ಇಲಾಖೆ ಜಂಟಿ ನಿರ್ದೇಶಕ ಎಸಿಬಿ ಬಲೆಗೆ.. - food department
ಆಹಾರ ಇಲಾಖೆ ಜಂಟಿ ನಿರ್ದೇಶಕ (ಜೆಡಿ) ಶ್ರೀಧರ್ ಲಂಚ ಪಡೆಯುತ್ತಿದ್ದಾಗಲೇ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಆಹಾರ ಇಲಾಖೆ ಜಂಟಿ ನಿರ್ದೇಶಕ (ಜೆಡಿ) ಎಸಿಬಿ ಬಲೆಗೆ
ಮೈನುದ್ದೀನ್ ಎಂಬುವರಿಂದ ಶ್ರೀಧರ್ ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಗರದ ಘಾಟಗೆ ಲೇಔಟ್ನಲ್ಲಿ ಎಸ್ಡಿಸಿ ಸಂತೋಷ ಮೂಲಕ ಮುಂಗಡವಾಗಿ ₹15 ಸಾವಿರ ಲಂಚ ಪಡೆಯುವಾಗ ಎಸಿಬಿ ಡಿವೈಎಸ್ಪಿ ಸುಧಾ ಆದಿ ನೇತೃತ್ವದ ತಂಡ ದಾಳಿ ನಡೆಸಿತು.
ಈ ವೇಳೆ ಲಂಚ ಪಡೆಯುತ್ತಿದ್ದ ಜೆಡಿ ಶ್ರೀಧರ್ ಹಾಗೂ ಎಸ್ಡಿಸಿ ಸಂತೋಷನನ್ನು ಎಸಿಬಿ ಅಧಿಕಾರಿಗಳು ಖೆಡ್ಡಾಗೆ ಕೆಡವಿದ್ದಾರೆ.ಸ್ಥಳಕ್ಕೆ ಎಸಿಬಿ ಎಸ್ಪಿ ವಿ ಎಮ್ ಜ್ಯೋತಿ ಭೇಟಿ ನೀಡಿದ್ದರು.