ಕಲಬುರಗಿ: ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಆಂಫೊಟೆರಿಸಿನ್-ಬಿ ಇಂಜೆಕ್ಷನ್ ಅನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಆರೋಪದಡಿ ಮಹಾರಾಷ್ಟ್ರ ಪೊಲೀಸರು ಜಿಮ್ಸ್ ಆಸ್ಪತ್ರೆ ಸಿಬ್ಬಂದಿಯೋರ್ವನನ್ನು ಬಂಧಿಸಿ ಕರೆದೊಯ್ದಿದ್ದಾರೆ. ಸ್ಟಾಫ್ ನರ್ಸ್ ಆಗಿರುವ ಹಾಗೂ ಸದ್ಯ ಆಸ್ಪತ್ರೆಯ ಐಸಿಯು ಇನ್ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದ ರಾಜಶೇಖರ ಭಜಂತ್ರಿ ಬಂಧಿತ ಆರೋಪಿ.
ಕಾಳಸಂತೆಯಲ್ಲಿ ಆಂಫೊಟೆರಿಸಿನ್-ಬಿ ಔಷಧ ಮಾರಾಟ: ಜಿಮ್ಸ್ ಸ್ಟಾಫ್ ನರ್ಸ್ ಬಂಧನ - Jim's hospital Staff Nurse arrested
ಜಿಮ್ಸ್ ಆಸ್ಪತ್ರೆಯಲ್ಲಿನ 6 ವಯಲ್ಸ್ ಆಂಫೊಟೆರಿಸಿನ್-ಬಿ ಔಷಧವನ್ನು ಮಹಾರಾಷ್ಟ್ರದಲ್ಲಿ ಮಾರಾಟ ಮಾಡಿದ್ದ ಜಿಮ್ಸ್ ಆಸ್ಪತ್ರೆಯ ಸ್ಟಾಫ್ ನರ್ಸ್ ರಾಜಶೇಖರ ಭಜಂತ್ರಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.
ಕಾಳಸಂತೆಯಲ್ಲಿ ಆಂಫೊಟೆರಿಸಿನ್-ಬಿ ಔಷಧ ಮಾರಾಟ
ಈತ ಜಿಮ್ಸ್ ಆಸ್ಪತ್ರೆಯಲ್ಲಿನ 6 ವಯಲ್ಸ್ ಆಂಫೊಟೆರಿಸಿನ್-ಬಿ ಔಷಧವನ್ನು ಮಹಾರಾಷ್ಟ್ರದಲ್ಲಿ ಮಾರಾಟ ಮಾಡಿದ್ದ. ಈ ದಂಧೆಯ ಜಾಡು ಬೆನ್ನತ್ತಿದ ಮಹಾರಾಷ್ಟ್ರ ಪೊಲೀಸರು, ಸೋಮವಾರ ತಡರಾತ್ರಿ ಆರೋಪಿ ರಾಜಶೇಖರನನ್ನು ಬಂಧಿಸಿ ಮಹಾರಾಷ್ಟ್ರಕ್ಕೆ ಕರೆದೊಯ್ದಿದ್ದಾರೆ. ಕಾಳಸಂತೆಯಲ್ಲಿ ಔಷಧ ಮಾರಾಟ ದಂಧೆಯಲ್ಲಿ ಜಿಮ್ಸ್ನ ಇನ್ನಷ್ಟು ಸಿಬ್ಬಂದಿ ಭಾಗಿಯಾಗಿರುವ ಶಂಕೆಯಿದ್ದು, ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ:ಪ್ರಿಯಕರನ ಪ್ರೀತಿಗಾಗಿ ಗಾಂಜಾ ಮಾರಾಟ; ಎಂಜಿನಿಯರಿಂಗ್ ಪದವೀಧರೆ ಬಂಧನ