ಕಲಬುರಗಿ:ಪಂಚಮಸಾಲಿ ಸಮುದಾಯವನ್ನ 2ಎ ಗೆ ಸೇರ್ಪಡೆಗೊಳಿಸಲು ಹೋರಾಟ ಚುರುಕುಗೊಳಿಸುವುದಾಗಿ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯವನ್ನು ರಾಜ್ಯ ಮಟ್ಟದಲ್ಲಿ 2ಎಗೆ ಸೇರ್ಪಡೆಗೊಳಿಸಲು ಆಗ್ರಹಿಸಿದ್ದೇವೆ. ನಮ್ಮ ಸಮುದಾಯದಿಂದ ರಾಜ್ಯಕ್ಕೆ ಮೂವರು ಸಿಎಂಗಳನ್ನ ನೀಡಿದ್ದೇವೆ. ಆದರೂ ಪಂಚಮಸಾಲಿ ಸಮುದಾಯವನ್ನ ಕಡೆಗಣಿಸಲಾಗಿದ್ದು, ನಮ್ಮ ಮಕ್ಕಳಿಗೆ ಮೀಸಲಾತಿ ಸಿಗಬೇಕಾದ ಕಾಲ ಸನ್ನಿಹಿತವಾಗಿದೆ ಎಂದರು.