ಕಲಬುರಗಿ :ಅಕ್ರಮವಾಗಿ ರೆಮಿಡಿಸಿವರ್ ಇಂಜೆಕ್ಷನ್ ಮಾರಾಟದಲ್ಲಿ ತೊಡಗಿದ್ದ ಜಾಲವನ್ನು ಕಲಬುರಗಿ 'ಎ' ಉಪ ವಿಭಾಗದ ಪೊಲೀಸರು ಪತ್ತೆ ಮಾಡಿ ಮೂವರನ್ನು ಬಂಧಿಸಿದ್ದಾರೆ.
ಜೇವರ್ಗಿ ತಾಲೂಕಿನ ಯಾಳವಾರ ಗ್ರಾಮದ ಭೀಮಾಶಂಕರ ಅರಬೋಳ (27) ಹಾಗೂ ಅಫಜಲಪುರ ತಾಲೂಕಿನ ಅಂಕಲಗಾ ಗ್ರಾಮದ ಲಕ್ಷ್ಮಿಕಾಂತ ಮೂಲಗೆ (20), ಕಲಬುರಗಿಯ ಖಮರ್ ಕಾಲೋನಿ ನಿವಾಸಿ ಜಿಲಾನಿಖಾನ (32) ಬಂಧಿತ ಆರೋಪಿಗಳು.
ಭೀಮಾಶಂಕರ ಡಯಾಗ್ನೋಸ್ಟಿಕ್ ಲ್ಯಾಬಿನಲ್ಲಿ, ಲಕ್ಷ್ಮಿಕಾಂತ ಮೆಡಿಕಲ್‌ನಲ್ಲಿ, ಜಿಲಾನಿಖಾನ್ ಸ್ಟಾಫ್ನರ್ಸ್ ಆಗಿ ಕೆಲಸ ಮಾಡುತ್ತಿದ್ದ. ಬೆಳಗಾವಿ ಹಾಗೂ ಬೆಂಗಳೂರಿನಿಂದ ರೆಮಿಡಿಸಿವಿಯರ ತರಿಸಿಕೊಂಡು 25 ಸಾವಿರಕ್ಕೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು.
ಬಂಧಿತರಿಂದ 14 ರೆಮಿಡಿಸಿವರ್ ಇಂಜೆಕ್ಷನ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.