ಕಲಬುರಗಿ: ಗಡಿ ಭಾಗದಲ್ಲಿ ಕನ್ನಡ ಉಳಿಯಬೇಕಾದ್ರೆ ಮೊದಲು ಗಡಿ ಭಾಗದ ಮನೆಗಳಲ್ಲಿ ಕನ್ನಡ ಮಾತನಾಡುವಂತಾಗಬೇಕು ಎಂದು ಹಿರಿಯ ಸಾಹಿತಿ 85 ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಹೆಚ್.ಎಸ್.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಸಮ್ಮೇಳನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಗಡಿ ಭಾಗದಲ್ಲಿ ಕನ್ನಡ ಉಳಿಸಲು ಮಾಡಬೇಕಾದ ಮೊದಲ ಕೆಲಸದ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಗಡಿ ಭಾಗದ ಮನೆ ಮನೆಗಳಲ್ಲಿ ಮೊದಲು ಕನ್ನಡ ಭಾಷೆ ಬಳಕೆಯಾಗಬೇಕು. ನಂತರ ಮಕ್ಕಳ ಶಿಕ್ಷಣ ಕನ್ನಡವಾಗಬೇಕು. ಮನೆಯೇ ಮೊದಲ ಪಾಠಶಾಲೆಯಾದ್ರೆ ಗಡಿಯಲ್ಲಿ ಕನ್ನಡ ಭಾಷೆ ರಕ್ಷಣೆ ಖಂಡಿತ ಎಂದು ಅಭಿಪ್ರಾಯ ಪಟ್ಟರು.