ಕಲಬುರಗಿ: ಹಿಂದಿನಿಂದಲೂ ಅಕ್ರಮಗಳು ನಡೆದುಕೊಂಡು ಬಂದಿವೆ. ಆಗಲೇ ತಡೆದಿದ್ದರೆ ಇವತ್ತು ಇಷ್ಟರ ಮಟ್ಟಿಗೆ ಹೋಗ್ತಿರಲಿಲ್ಲ. ಹಿಂದೆ ಆಗದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಕರ್ನಾಟಕ ಪೊಲೀಸರು ದೇಶಕ್ಕೆ ಮಾದರಿಯಾಗಿದ್ರು. ಆದ್ರೆ ಪೊಲೀಸ್ ಇಲಾಖೆಯಲ್ಲಿ ಮೊನ್ನೆ ನಡೆದಿದ್ದೇನು?, ಪ್ರಕರಣದಲ್ಲಿ ಓರ್ವ ಡಿವೈಎಸ್‌ಪಿ ಬಂಧನವಾಗಿದೆ. ಇದು ನಾಚಿಕೆಗೇಡಿನ ಸಂಗತಿ ಅಂತ ಗೃಹಮಂತ್ರಿ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿಯ ತಾಜ್ ಸುಲ್ತಾನಪುರದ ಕೆ.ಎಸ್.ಆರ್.ಪಿ. ತರಬೇತಿ ಶಾಲೆಯಲ್ಲಿ ಕರ್ನಾಟಕ ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳ 4ನೇ ತಂಡದ ನಿರ್ಗಮನ ಪಥಸಂಚಲನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಹೊಸದಾಗಿ ಪೊಲೀಸರಾದವರಿಗೆ ಹಲವು ಸಲಹೆ ನೀಡಿದರು. ಇದೇ ವೇಳೆ, ಪಿಎಸ್ಐ ಪ್ರಕರಣದ ಹಿಂದೆ ಯಾರು ಬೇಕಾದರೂ ಇರಲಿ, ಅವರಿಗೆ ಶಿಕ್ಷೆ ನೀಡುವಂತೆ ಸಿಐಡಿಗೆ ಆದೇಶ ನೀಡಲಾಗಿದೆ. ತನಿಖಾ ತಂಡಕ್ಕೆ ಫ್ರೀ ಹ್ಯಾಂಡ್ ಕೊಟ್ಟಿದೇವೆ. ಯಾರೇ ಭಾಗಿಯಾಗಿದ್ರು ಬಂಧಿಸದೇ ಬೀಡಬೇಡಿ ಎಂದು ಸಿಐಡಿಗೆ ಸೂಚನೆ ನೀಡಲಾಗಿದೆ ಎಂದರು.