ಕಲಬುರಗಿ:ಸಹಾಯಕ ಪ್ರಾಧ್ಯಾಪಕನೊಬ್ಬ ಕಾಲೇಜಿನ ಪ್ರಾಂಶುಪಾಲರ ಮೇಲೆ ಎರಚಲು ಯತ್ನಿಸಿದ್ದಲ್ಲದೆ, ಹಲ್ಲೆಗೂ ಮುಂದಾದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಮಾ.21ರಂದು ಪ್ರತಿಷ್ಠಿತ ಹೆಚ್‌ಕೆಇ ಸೊಸೈಟಿಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಅರುಣ್ ಕುಮಾರ್ ಬೆನಕಳ ಅವರ ಮೇಲೆ ಆ್ಯಸಿಡ್ ಎರಚಲು ಹಾಗೂ ಹಲ್ಲೆ ನಡೆಸಲು ಯತ್ನಿಸಲಾಗಿದೆ ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಫಾರ್ಮಸಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿರುವ ಶಾಂತವೀರ ಸಲಗಾರ ಎಂಬಾತ ಆ್ಯಸಿಡ್ ಎರಚಲು ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿದೆ. ಶಾಂತವೀರ ಪರೀವಿಕ್ಷಣಾ ಇನ್ಸ್ಪೆಕ್ಟರ್ ಆಗಿ ನೇಮಕವಾಗಬೇಕಾಗಿತ್ತು. ಆದರೆ, ಪ್ರಿನ್ಸಿಪಾಲ್ ಅರುಣ್ ಕುಮಾರ್ ತಮ್ಮ ಕೈವಾಡದಿಂದ ತನಗೆ ಹುದ್ದೆ ತಪ್ಪಿದೆ ಎಂದು ಆಕ್ರೋಶಗೊಂಡು ಶಾಂತವೀರ ಎಸಿಡ್ ದಾಳಿ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.