ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸಿದರೆಂಬ ಕ್ಷುಲ್ಲಕ ಕಾರಣಕ್ಕೆ ವರ್ಗ ಸಂಘರ್ಷ ನಡೆದಿರುವ ಆರೋಪ ಜೇವರ್ಗಿ ತಾಲೂಕಿನ ನೇದಲಗಿ ಗ್ರಾಮದಲ್ಲಿ ಕಂಡುಬಂದಿದೆ.
ವರ್ಗ ಸಂಘರ್ಷ ಆರೋಪ ಪ್ರಕರಣ : ಹಲ್ಲೆಕೋರರ ಬಂಧನಕ್ಕೆ ಬಲೆ ಬಿಸಿದ ಪೊಲೀಸರು - Kalaburagi
ಕ್ಷುಲ್ಲಕ ಕಾರಣಕ್ಕೆ ಜೇವರ್ಗಿ ತಾಲೂಕಿನ ನೇದಲಗಿ ಗ್ರಾಮದಲ್ಲಿ ವರ್ಗ ಸಂಘರ್ಷ ನಡೆದಿದ್ದು, ಮೂವರಿಗೆ ಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
![ವರ್ಗ ಸಂಘರ್ಷ ಆರೋಪ ಪ್ರಕರಣ : ಹಲ್ಲೆಕೋರರ ಬಂಧನಕ್ಕೆ ಬಲೆ ಬಿಸಿದ ಪೊಲೀಸರು](https://etvbharatimages.akamaized.net/etvbharat/prod-images/768-512-3293387-thumbnail-3x2-lekjpg.jpg)
ಕ್ಷುಲ್ಲಕ ಕಾರಣಕ್ಕೆ ಜೇವರ್ಗಿ ತಾಲೂಕಿನ ನೇದಲಗಿ ಗ್ರಾಮದಲ್ಲಿ ವರ್ಗ ಸಂಘರ್ಷ
ಕ್ಷುಲ್ಲಕ ಕಾರಣಕ್ಕೆ ಜೇವರ್ಗಿ ತಾಲೂಕಿನ ನೇದಲಗಿ ಗ್ರಾಮದಲ್ಲಿ ವರ್ಗ ಸಂಘರ್ಷ
ಗ್ರಾಮದ ದೌಲಪ್ಪ ಮಾದರ ಎಂಬುವರ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ದೊಣ್ಣೆಗಳಿಂದ ಮನಬಂದಂತೆ ಕುಟುಂಬಸ್ಥರಿಗೆ ಥಳಿಸಿದ್ದಾರೆಂದು ತಿಳಿದುಬಂದಿದೆ. ಘಟನೆಯಲ್ಲಿ ದೌಲಪ್ಪ ಸೇರಿ ಮೂವರಿಗೆ ಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಡಿಎಸ್ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಹಲ್ಲೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.
TAGGED:
Kalaburagi