ಕಲಬುರಗಿ: ಜಿಲ್ಲೆಯಾದ್ಯಂತ ಕಳೆದ ಎರಡ್ಮೂರು ದಿನಗಳಿಂದ ಕೊಂಚ ಮಟ್ಟಿಗೆ ರಿಲೀಫ್ ಕೊಟ್ಟಿದ್ದ ಮಳೆರಾಯ ಇಂದು ಮತ್ತೆ ಆರ್ಭಟಿಸುತ್ತಿದ್ದಾನೆ. ಬೆಳಗ್ಗೆಯಿಂದ ನಗರದಾದ್ಯಂತ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಹೊರಗೆ ಬಂದಿದ್ದ ಜನರಿಗೆ ವರುಣ ಶಾಕ್ ಕೊಟ್ಟಿದ್ದಾನೆ.
ಕಲಬುರಗಿಯಲ್ಲಿ ಮತ್ತೆ ಆರ್ಭಟಿಸುತ್ತಿರುವ ವರುಣ.. ಜನರಿಗೆ ಆತಂಕ - ಕಲಬುರಗಿ ರಸ್ತೆಗಳು ಜಲಾವೃತ
ಕಲಬುರಗಿಯಲ್ಲಿ ಮತ್ತೆ ವರುಣನ ಆರ್ಭಟ- ಮಳೆ ಮುಂದುವರೆದರೆ ಮತ್ತಷ್ಟು ಅನಾಹುತಗಳು ಸಂಭವಿಸುವ ಆತಂಕ
ಕಲಬುರಗಿಯಲ್ಲಿ ಭಾರಿ ಮಳೆ
ಮಳೆಯಿಂದಾಗಿ ನಗರದ ಅನೇಕ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಜೊತೆಗೆ ಕೊಳಚೆ ನೀರು ರಸ್ತೆಯೆಲ್ಲ ತುಂಬಿಕೊಂಡಿದೆ. ಅಷ್ಟೇ ಅಲ್ಲದೆ, ಕಳೆದ 10 ದಿನಗಳಿಂದ ಬಿಟ್ಟು ಬಿಡದಂತೆ ಸುರಿದಿದ್ದರಿಂದ ಮಳೆಯಿಂದಾಗಿ ಚಿತ್ತಾಪುರ ಹಾಗೂ ಕಾಳಜಿಯಲ್ಲಿ ಇಬ್ಬರು ಬಲಿಯಾಗಿದ್ದಾರೆ. 500ಕ್ಕೂ ಹೆಚ್ಚು ಮನೆಗಳು ಕುಸಿದಿವೆ ಹಾಗೂ 50ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ.
ಇದನ್ನೂ ಓದಿ:ಭಾರಿ ಮಳೆಯಿಂದ ಕುಸಿದ ರಸ್ತೆ.. ಎಎಂಸಿಯ ದಿವ್ಯ ನಿರ್ಲಕ್ಷ್ಯ ಬಯಲು- Video Viral