ಕರ್ನಾಟಕ

karnataka

ETV Bharat / city

ಕಲಬುರಗಿ ಜಿಲ್ಲೆಯಾದ್ಯಂತ ಮುಂದುವರೆದ ವರುಣಾರ್ಭಟ.. ಜನ ಹೈರಾಣ - ಕಲಬುರಗಿ ಮಳೆ ಸುದ್ದಿ

ಕಲಬುರಗಿ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ.

kalburgi
ಕಲಬುರಗಿ

By

Published : Oct 10, 2021, 6:02 PM IST

ಕಲಬುರಗಿ:ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಜನ ಹೈರಾಣಾಗಿದ್ದಾರೆ. ಇಂದೂ ಸಹ ನಿರಂತರವಾಗಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು‌, ಜನರು ಮನೆಯಿಂದ ಆಚೆ ಬರಲು ಹೆದರುತ್ತಿದ್ದಾರೆ.

ಕಲಬುರಗಿ ಜಿಲ್ಲೆಯಾದ್ಯಂತ ಮುಂದುವರೆದ ವರುಣಾರ್ಭಟ

ಹವಾಮಾನ ಇಲಾಖೆ ಜಿಲ್ಲೆಯಾದ್ಯಂತ ಇನ್ನೂ 3 ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ನೀಡಿದೆ. ಅದರಂತೆ ಇಂದು ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರೆದಿದೆ.

ಮಳೆಯ ಉಪಟಳದಿಂದ ಜಿಲ್ಲೆಯ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮರು ಬೆಳೆ ಕೂಡ ನಾಶವಾಗುವ ಭೀತಿ ರೈತರಿಗೆ ಎದುರಾಗಿದೆ.

ಈಗಾಗಲೇ ಜಿಲ್ಲೆಯ ಹಲವೆಡೆ ಜಮೀನುಗಳಲ್ಲಿ ನೀರು ಶೇಖರಣೆಯಾಗಿ ನೂರಾರು ಹೆಕ್ಟೇರ್​​ ಬೆಳೆ ನಾಶವಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಇತ್ತ ನಗರ ಪ್ರದೇಶದ ಜನರು ಸಹ ಎಡೆಬಿಡದ ಮಳೆಯಿಂದಾಗಿ ಬೇಸತ್ತಿದ್ದಾರೆ.

ಇದನ್ನೂ ಓದಿ:ಕುಮಟಾದಲ್ಲಿ ಮನೆಗೆ ನುಗ್ಗಿ ಮಗು ಹೊತ್ತೊಯ್ಯುತ್ತಿದ್ದ ಚಿರತೆ.. ಎದೆಗುಂದದೆ ಮೊಮ್ಮಗನ ರಕ್ಷಿಸಿದ ಅಜ್ಜ

ABOUT THE AUTHOR

...view details