ಕರ್ನಾಟಕ

karnataka

ETV Bharat / city

ಮದುವೆ ಮನೆಯಲ್ಲಿ ಪಟಾಕಿ ಸದ್ದು... ದಲಿತ-ಸವರ್ಣೀಯರ ಮಧ್ಯೆ ಘರ್ಷಣೆ: 10 ಜನರಿಗೆ ಗಾಯ - undefined

ಪಟಾಕಿ ಸಿಡಿಸುವ ಸಂಬಂಧ ದಲಿತ ಸಮುದಾಯ ಮತ್ತು ಸವರ್ಣೀಯರ ನಡುವೆ ಗಲಾಟೆ. ಎರಡು ಗುಂಪಿನವರು ಪರಸ್ಪರ ಕಲ್ಲು ತೂರಾಟ ಮಾಡಿದ್ದರಿಂದ ಪರಿಸ್ಥಿತಿ ಉದ್ವಿಗ್ನ. ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಲಿತ-ಸವರ್ಣೀಯರ ನಡುವೆ ಘರ್ಷಣೆ

By

Published : May 27, 2019, 11:14 AM IST

ಕಲಬುರಗಿ: ಮದುವೆ ಸಮಾರಂಭದಲ್ಲಿ ಪಟಾಕಿ ಸಿಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಹಾಗೂ ಸವರ್ಣೀಯರ ನಡುವೆ ಘರ್ಷಣೆ ಉಂಟಾಗಿದ್ದು, 10 ಜನ ಗಾಯಗೊಂಡ ಘಟನೆ ಯಡ್ರಾಮಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಭಾನುವಾರ ಈ ಘಟನೆ ನಡೆದಿದೆ. ದಲಿತ ಸಮುದಾಯದ ಯುವಕನ ಮದುವೆ ಸಮಾರಂಭದಲ್ಲಿ ಪಟಾಕಿ ಸಿಡಿಸುವ ಸಂಬಂಧ ಗಲಾಟೆಯಾಗಿದ್ದು, ಎರಡು ಗುಂಪಿನವರು ಪರಸ್ಪರ ಕಲ್ಲು ತೂರಾಟ ಮಾಡಿದ್ದಾರೆ. ಸ್ಥಳದಲ್ಲಿದ್ದ ಲಾರಿಗಾಜು ಪುಡಿ ಪುಡಿಯಾಗಿದೆ.

ದಲಿತ-ಸವರ್ಣೀಯರ ನಡುವೆ ಘರ್ಷಣೆ

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಯಡ್ರಾಮಿ ಪೊಲೀಸರು ದೌಡಾಯಿಸಿ ಪರಿಸ್ಥಿತಿ ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ಪೊಲೀಸ್ ಜೀಪ್ ಗಾಜು ಸಹ ಪುಡಿಯಾಗಿದೆ ಎಂದು ತಿಳಿದುಬಂದಿದೆ.

ಈ ವೇಳೆ ಗಾಯಗೊಂಡವರನ್ನು ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

For All Latest Updates

TAGGED:

ABOUT THE AUTHOR

...view details