ಕರ್ನಾಟಕ

karnataka

ETV Bharat / city

ಗಡಿ ಕನ್ನಡಿಗರ ಸಮಸ್ಯೆಗೆ ವೇದಿಕೆ ಕಲ್ಪಿಸುವಂತೆ ಆಗ್ರಹ - Frontier Kannada association protest

85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಗಡಿ ಕನ್ನಡಿಗರ ಸಮಸ್ಯೆಗೆ ವೇದಿಕೆ ಕಲ್ಪಿಸುವಂತೆ ಗಡಿನಾಡು ಕನ್ನಡ ಸಂಘದ ಉಪಾಧ್ಯಕ್ಷ ಅಮರ್ ದೀಕ್ಷಿತ್ ಆಗ್ರಹಿಸಿದ್ದಾರೆ.

Frontier Kannada association demand to give place to share problems
ಗಡಿನಾಡು ಕನ್ನಡ ಸಂಘ

By

Published : Feb 2, 2020, 3:57 PM IST

Updated : Feb 2, 2020, 4:12 PM IST

ಕಲಬುರಗಿ:ನಗರದಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಗಡಿ ಕನ್ನಡಿಗರ ಸಮಸ್ಯೆಗೆ ವೇದಿಕೆ ಕಲ್ಪಿಸುವಂತೆ ಗಡಿನಾಡು ಕನ್ನಡ ಸಂಘ ಆಗ್ರಹಿಸಿದೆ.

ಈ ಕುರಿತು ನಗರದಲ್ಲಿ ಮಾತನಾಡಿದ ತೆಲಂಗಾಣದ ಕೃಷ್ಣಾ ಮಂಡಲದ ಗಡಿನಾಡು ಕನ್ನಡ ಸಂಘದ ಉಪಾಧ್ಯಕ್ಷ ಅಮರ್ ದೀಕ್ಷಿತ್, ಅತ್ತ ತೆಲಂಗಾಣ ಇತ್ತ ಕರ್ನಾಟಕ ಸರ್ಕಾರಗಳು ಗಡಿ ಕನ್ನಡಿಗರ ಬಗ್ಗೆ ತಾತ್ಸಾರದಿಂದ ನೋಡುತ್ತಿವೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 5, 6 ಮತ್ತು 7 ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಡಿ ಕನ್ನಡಿಗರಿಗೆ ವೇದಿಕೆ ಕಲ್ಪಿಸಬೇಕು.

ಗಡಿ ಕನ್ನಡಿಗರ ಸಮಸ್ಯೆಗೆ ವೇದಿಕೆ ಕಲ್ಪಿಸುವಂತೆ ಆಗ್ರಹ

ಹೊರ ರಾಜ್ಯದ ಕನ್ನಡಿಗರ ಸಮಸ್ಯೆ ಚರ್ಚೆಗೆ ಅವಕಾಶ ನೀಡಬೇಕು. ಹೊರನಾಡ ಕನ್ನಡಿಗರಿಗೆ ಕರ್ನಾಟಕದ ವಿದ್ಯಾರ್ಥಿಗಳಿಗೆ ನೀಡೋ ಸೌಲಭ್ಯ ಕಲ್ಪಿಸಬೇಕೆಂದು ದೀಕ್ಷಿತ್ ಆಗ್ರಹಿಸಿದ್ದಾರೆ. ಈ ಕುರಿತು ಕಸಾಪ ಅಧ್ಯಕ್ಷ ಮನು ಬಳಿಗಾರ ಅವರ ಗಮನಕ್ಕೆ ತರಲಾಗಿದೆ ಆದರೂ ಸಹ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಒಂದು ವೇಳೆ ಅವಕಾಶ ನೀಡದೆ ಇದಲ್ಲಿ ಸಮ್ಮೇಳನದಲ್ಲಿ ಕಪ್ಪು ಪಟ್ಟಿ ಧರಿಸಿ ಮೌನವಾಗಿ ಪ್ರತಿಭಟಿಸಲಾಗುವುದು ಎಂದರು.

Last Updated : Feb 2, 2020, 4:12 PM IST

ABOUT THE AUTHOR

...view details