ಕರ್ನಾಟಕ

karnataka

ETV Bharat / city

ಹಿಜಾಬ್‌ ವಿರೋಧಿಸುವವರಿಗೆ ಬೆದರಿಕೆ ಆರೋಪ: ಕೈ ಮುಖಂಡ ಮುಕ್ರಂಖಾನ್ ವಿರುದ್ಧ ಎಫ್‌ಐಆರ್‌ - ಹಿಜಾಬ್ ಬಗ್ಗೆ ಕಾಂಗ್ರೆಸ್ ನಾಯಕ ತುಂಡು ತುಂಡು ಹೇಳಿಕೆ

ಹಿಜಾಬ್ ವಿರೋಧಿಸುವವರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಮುಕ್ರಂಖಾನ್ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ.

congress-leader-mukarram-khan
congress-leader-mukarram-khan

By

Published : Feb 18, 2022, 10:28 AM IST

Updated : Feb 18, 2022, 12:33 PM IST

ಕಲಬುರಗಿ:ಪ್ರಚೋದನಕಾರಿ ಭಾಷಣ, ಕೋಮು ಸೌಹಾರ್ದತೆ ಕದಡುವ ನಿಟ್ಟಿನಲ್ಲಿ ಹೇಳಿಕೆ ನೀಡಿದ ಗಂಭೀರ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ಮುಕ್ರಂಖಾನ್ ಮೇಲೆ‌ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹಿಜಾಬ್ ವಿರೋಧಿಸುವವರ ವಿರುದ್ಧ ಮುಕ್ರಂಖಾನ್ ಪ್ರಚೋದನಾತ್ಮಕ ಹೇಳಿಕೆ‌ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ಮುಖಂಡನ ವಿರುದ್ಧ ಐಪಿಸಿ 153,294 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೈ ಮುಖಂಡ ಮುಕ್ರಂಖಾನ್ ವಿರುದ್ಧ ಎಫ್‌ಐಆರ್‌

ಮುಕ್ರಂಖಾನ್ ಹೇಳಿಕೆ‌ ಖಂಡಿಸಿ ಹಿಂದೂಪರ ಸಂಘಟನೆಗಳು ಠಾಣೆಯ ಮುಂದೆ ಪ್ರತಿಭಟನೆ ಮಾಡಿದ್ದವು.

ಇದನ್ನೂ ಓದಿ: ಕಾಂಗ್ರೆಸ್ ಮುಖಂಡನ ಪ್ರಚೋದನಕಾರಿ ಹೇಳಿಕೆಗೆ ಸಿದ್ಧಲಿಂಗ ಶಿವಾಚಾರ್ಯರರು ಕಿಡಿ

Last Updated : Feb 18, 2022, 12:33 PM IST

For All Latest Updates

ABOUT THE AUTHOR

...view details