ಕರ್ನಾಟಕ

karnataka

ETV Bharat / city

ಜನ್ಮದಾತರ ನೆನಪಿಗಾಗಿ ಮೂರ್ತಿ ಪ್ರತಿಷ್ಠಾಪಿಸಿದ ಆಧುನಿಕ ಶ್ರವಣಕುಮಾರ... - ದಶರಥ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ತಂದೆ-ವಿಶ್ವನಾಥ್ ಹಾಗೂ ತಾಯಿ-ಲಕ್ಷ್ಮಿಬಾಯಿ ನಿಧನರಾದ ಹಿನ್ನೆಲೆ, ಅವರ ಸವಿ ನೆನಪಿಗಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಅಂದಾಜು 2 ಲಕ್ಷ ರೂ. ಖರ್ಚಿನಲ್ಲಿ ಹೆತ್ತವರ ಮೂರ್ತಿ ಪ್ರತಿಷ್ಠಾಪಿಸಿದ್ದು, ಗ್ರಾಮಸ್ಥರೆಲ್ಲರೂ ಪಾಲ್ಗೊಂಡು ದಶರಥ ಪಾತ್ರೆ ಕಾರ್ಯವನ್ನು ಶ್ಲಾಘಿಸಿದ್ದಾರೆ.

father mother embodiment of the statue kalburagi news
ಜನ್ಮದಾತರ ನೆನಪಿಗಾಗಿ ಮೂರ್ತಿ ಪ್ರತಿಷ್ಠಾಪಿಸಿದ ಆಧುನಿಕ ಶ್ರವಣಕುಮಾರ

By

Published : Jan 24, 2021, 4:41 PM IST

Updated : Jan 24, 2021, 6:35 PM IST

ಕಲಬುರಗಿ: ತಂದೆ-ತಾಯಿ ನೆನಪಿಗಾಗಿ ಪುತ್ರನೋರ್ವ ಜನ್ಮದಾತರ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಆಧುನಿಕ ಶ್ರವಣಕುಮಾರ ಎಂದೆನಿಸಿಕೊಂಡಿದ್ದಾರೆ.

ಜನ್ಮದಾತರ ನೆನಪಿಗಾಗಿ ಮೂರ್ತಿ ಪ್ರತಿಷ್ಠಾಪಿಸಿದ ಆಧುನಿಕ ಶ್ರವಣಕುಮಾರ

ಓದಿ: FDA ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಎಷ್ಟೇ ಪ್ರಭಾವಿಗಳಿದ್ದರೂ ಕ್ರಮ: ಬಸವರಾಜ ಬೊಮ್ಮಾಯಿ

ಜಿಲ್ಲೆಯ ಆಳಂದ ತಾಲೂಕಿನ ನಿರಗುಡಿ ಗ್ರಾಮದ ದಶರಥ ಪಾತ್ರೆ ತಮ್ಮ ಗ್ರಾಮದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ತಂದೆ-ವಿಶ್ವನಾಥ್ ಹಾಗೂ ತಾಯಿ-ಲಕ್ಷ್ಮಿಬಾಯಿ ನಿಧನರಾದ ಹಿನ್ನೆಲೆ, ಅವರ ಸವಿ ನೆನಪಿಗಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಅಂದಾಜು 2 ಲಕ್ಷ ರೂ. ಖರ್ಚಿನಲ್ಲಿ ಹೆತ್ತವರ ಮೂರ್ತಿ ಪ್ರತಿಷ್ಠಾಪಿಸಿದ್ದು, ಗ್ರಾಮಸ್ಥರೆಲ್ಲರೂ ಪಾಲ್ಗೊಂಡು ದಶರಥ ಪಾತ್ರೆ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಮೃತ ದಂಪತಿಗಳು ಮೂವರು ಗಂಡು ಮಕ್ಕಳನ್ನು ಹೊಂದಿದ್ದಾರೆ. ಜಗನ್ನಾಥ, ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾರೆ. ದಶರಥ ಪಾತ್ರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದು, ಧನರಾಜ ಎಫ್.ಡಿ.ಎ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ದಂಪತಿಗಳು ತಮ್ಮ ಜೀವನಾವಧಿ ಶ್ರಮಿಸಿ ಮಕ್ಕಳಿಗೆ ಉನ್ನತ ಸ್ಥಾನಮಾನ ದೊರೆಯುವಂತೆ ನೋಡಿಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬೆಳೆದ ಮಕ್ಕಳು ಅವರ ಸದಾಕಾಲ ನೆನಪಿಗಾಗಿ ತಂದೆ-ತಾಯಿ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ‌‌.

Last Updated : Jan 24, 2021, 6:35 PM IST

ABOUT THE AUTHOR

...view details