ಕಲಬುರಗಿ:ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ರೈತ ಮೃತಪಟ್ಟಿರುವ ಘಟನೆ ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ನಡೆದಿದೆ.
ಕಲಬುರಗಿ: ಸಿಡಿಲು ಬಡಿದು ರೈತ ಸಾವು - ನಿಂಬರ್ಗಾ ಪೊಲೀಸ್ ಠಾಣೆ
ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ರೈತ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ನಡೆದಿದೆ.
ಸಿಡಿಲು ಬಡಿದು ರೈತ ಸಾವುc
ಗ್ರಾಮದ ಸಿದ್ದರಾಮ್ ಸುತ್ತಾರ್ (58) ಮೃತ ದುರ್ದೈವಿ. ಹೊಲದಲ್ಲಿ ಕೆಲಸ ಮಾಡುವಾಗ ಮಳೆ ಬಂದಿದ್ದರಿಂದ ಮರದ ಕೆಳಗೆ ನಿಂತಾಗ ಈ ಅವಘಡ ಸಂಭವಿಸಿದೆ. ಈತನ ಮಗ ಸಹ ಹೊಲದಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಅದೃಷ್ಟವಾಶತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಮರಣೊತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Jul 1, 2020, 12:14 AM IST