ಕಲಬುರಗಿ : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ವಾಗ್ದಾಳಿ ಮುಂದುವರಿದಿದ್ದು, ಇದೀಗ ಅವರೊಬ್ಬ ಕುಡುಕ ಎಂದು ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ಹೆಂಡಾ ಕುಡಿದಾಗ ಒಂದು ಮಾತಾಡ್ತಾರೆ. ಹೆಂಡ ಕುಡಿದೇ ಇದ್ದಾಗ ಒಂದು ಮಾತಾಡ್ತಾರೆ ಎಂದು ಗುಡುಗಿದರು.
ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವಪ್ಪ ವಾಗ್ದಾಳಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಟಿಲ್ ಒಬ್ಬ ಭಯೋತ್ಪಾದಕ ಎನ್ನುವ ಸಿದ್ರಾಮಯ್ಯ ಹೇಳಿಕೆಗೆ ತೀರುಗೇಟು ನೀಡಿದರು. ಸಿದ್ರಾಮಯ್ಯ ಒಬ್ಬ ಮಹಾನ್ ಮೋಸಗಾರ ಅವರ ರಕ್ತದ ಕಣಕಣದಲ್ಲಿ ಮೋಸ ಇದೆ. ಮೊದಲು ಜೆಡಿಎಸ್ ಗೆ ಮೋಸ ಮಾಡಿದ್ರು. ಆಮೇಲೆ ಶ್ರೀನಿವಾಸ್ ಪ್ರಸಾದಗೆ ಮೋಸ ಮಾಡಿದ್ದಾರೆ. ಈಗ ಕಾಂಗ್ರೆಸ್ ಗೂ ಮೋಸ ಮಾಡಲು ರೆಡಿ ಆಗಿದ್ದಾರೆ ಎಂದು ಆರೋಪಿಸಿದರು.
ಕಟೀಲ್ ದೇಶ ಭಕ್ತ: ನಳಿನಕುಮಾರ ಕಟೀಲ್ ಒಬ್ಬ ದೇಶಭಕ್ತ, ಅಂತವರ ಬಗ್ಗೆ ಮೋಸಗಾರ ಸಿದ್ದರಾಮಯ್ಯ ಏನು ಮಾತಾಡ್ತಾರೆ..? ಶಾಸಕ ಜಮೀರ್ ಅಹ್ಮದ ಅಂತವರನ್ನು ಸಿದ್ರಾಮಯ್ಯ ಹೊಗಳ್ತಾರೆ. ಕಟೀಲ್ ಅಂತಹ ದೇಶ ಭಕ್ತರನ್ನ ಭಯೋತ್ಪಾದಕ ಅಂತಾರೆ ಎಂದು ಏಕವಚನದಲ್ಲೆ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ರಹಸ್ಯ ವರದಿ ಸುಳ್ಳು : ಬಿಜೆಪಿ ಹೈಕಮಾಂಡ್ ಸಚಿವರ ರಹಸ್ಯ ವರದಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಕೆಎಸ್ಈ, ರಹಸ್ಯ ವರದಿ ಬಗ್ಗೆ ನನಗಂತು ಗೊತ್ತಿಲ್ಲ, ನೀವು ಸಿಐಡಿ ಡಿಪಾರ್ಟ್‌ಮೆಂಟ್ ನಲ್ಲಿ ಇರಬಹುದೇನೋ, ಆರ್ ಎಸ್ ಎಸ್ ಮತ್ತು ಬಿಜೆಪಿಯಲ್ಲಿರುವ ಸಿಐಡಿ ಡಿಪಾರ್ಟ್‌ಮೆಂಟ್ ನಲ್ಲಿ ನೀವು ಇರಬಹುದು. ಇದೆಲ್ಲ ಸುಳ್ಳು ಸುದ್ದಿ, ಹೈಕಮಾಂಡ್ ಯಾವುದೇ ರಹಸ್ಯ ವರದಿಯನ್ನು ತರಿಸಿಕೊಂಡಿಲ್ಲ ಎಂದು ಕಲಬುರಗಿಯಲ್ಲಿ ಸಚಿವ ಕೆ ಸ್ ಈಶ್ವರಪ್ಪ ಹೇಳಿದ್ದಾರೆ.