ಕಲಬುರಗಿ :ಜಿಲ್ಲೆಯಲ್ಲಿ ಇಂದು 89 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 2,192ಕ್ಕೆ ಏರಿಕೆಯಾಗಿದೆ.
ಕಲಬುರಗಿಯಲ್ಲಿ 89 ಜನರಿಗೆ ತಗುಲಿದ ಕೊರೊನಾ ಮಹಾಮಾರಿ - ಕಲಬುರಗಿ ಕೊರೊನಾ ವೈರಸ್ ಪ್ರಕರಣಗಳು
ಶರಣರನಾಡು ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿಗೆಯಾಗುತ್ತಿದ್ದು, ಇಂದು 89 ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ.
ಕಲಬುರಗಿ ಕೊರೊನಾ ವರದಿ
ಇಂದು 29 ಜನ ಸೋಂಕಿತರು ಡಿಸ್ಚಾರ್ಜ್ ಆಗಿದ್ದು, ಇಲ್ಲಿವರೆಗೆ ಒಟ್ಟು 1,506 ಜನರು ರೋಗದಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿವರೆಗೆ ಒಟ್ಟು 36 ಜನ ಸೋಂಕಿನಿಂದ ಮೃತಪಟ್ಟಿದ್ದು, 650 ಸಕ್ರಿಯ ಪ್ರಕರಣಗಳಿವೆ.