ಕಲಬುರಗಿ:ಜಿಲ್ಲೆಯ ಚಿಂಚೋಳಿ ತಾಲೂಕಿನ ಕೆಲ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಆತಂಕದಿಂದ ಮನೆಯಿಂದ ಹೊರಬಂದ ಜನರು ಇಡಿ ರಾತ್ರಿ ಜಾಗರಣೆ ಮಾಡಿದ್ದಾರೆ.
ಚಿಂಚೋಳಿ ತಾಲೂಕಿನ ಗಡಿಕೇಶ್ವರ ಮತ್ತು ತೇಗಲತಿಪ್ಪಿ ಗ್ರಾಮದಲ್ಲಿ ತಡರಾತ್ರಿ 1 ಗಂಟೆ ವೇಳೆಯಲ್ಲಿ ಲಘು ಭೂಕಂಪನದ ಅನುಭವಾಗಿದೆ. ಗಡಿಕೇಶ್ವರ ಗ್ರಾಮದಲ್ಲಿ ಅನೇಕ ತಿಂಗಳಿಂದ ಭೂಮಿಯಿಂದ ಬಾರಿ ಸದ್ದು ಬರ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದು, ಈ ಮೊದಲೇ ಸದ್ದಿನಿಂದ ಕಂಗಾಲಾಗಿರೋ ಜನರು ಇದೀಗ ಲಘು ಭೂಕಂಪನದಿಂದ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.