ಕಲಬುರಗಿ:ಕುಡಿದ ಮತ್ತಿನಲ್ಲಿ ಪತಿಯೊರ್ವ ಪತ್ನಿಯನ್ನೆ ಕೊಂದು ಪರಾರಿಯಾಗಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಅಣವಾರ ಗ್ರಾಮದಲ್ಲಿ ನಡೆದಿದೆ.
ಕಲಬುರಗಿ: ಕುಡಿದ ಅಮಲಿನಲ್ಲಿ ಪತ್ನಿಯನ್ನು ಕೊಂದು ಪರಾರಿಯಾದ ಪತಿರಾಯ - ಅಣವಾರ ಮಹಿಳೆ ಕೊಲೆ
ಚಿಂಚೋಳಿ ತಾಲೂಕಿನ ಅಣವಾರ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿದ್ದ ಪತಿ ಪತ್ನಿಯನ್ನ ಕೊಂದು ಪರಾರಿಯಾಗಿರುವ ಘಟನೆ ನಡೆದಿದ್ದು, ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
![ಕಲಬುರಗಿ: ಕುಡಿದ ಅಮಲಿನಲ್ಲಿ ಪತ್ನಿಯನ್ನು ಕೊಂದು ಪರಾರಿಯಾದ ಪತಿರಾಯ drunken-husband-killed-wife-in-kalaburgi](https://etvbharatimages.akamaized.net/etvbharat/prod-images/768-512-7327679-thumbnail-3x2-murder.jpg)
ಕಲಬುರಗಿ ಹೆಂಡತಿ ಕೊಲೆ
ಶ್ರೀದೇವಿ(45) ಮೃತ ದುರ್ದೈವಿ. ಪತಿ ಮಲ್ಲಪ್ಪ ಪೂಜಾರಿ ರಾತ್ರಿ ಕುಡಿದು ಬಂದು ಶ್ರೀದೇವಿ ಮೇಲೆ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ ಎನ್ನಲಾಗಿದೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಪ್ರಕರಣ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಚಿಂಚೋಳಿ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಸೆರೆಗೆ ಬಲೆ ಬೀಸಿದ್ದಾರೆ.