ಕಲಬುರಗಿ: ಕೊರೊನಾ ವೈರಸ್ ಹಿನ್ನಲೆ ನಗರದ 7 ರೆಡ್ ಜೋನ್ ಏರಿಯಾಗಳ ಮೇಲೆ ಡ್ರೋನ್ ಕಣ್ಗಾವಲು ಇಡಲಾಗಿದ್ದು, ಈ ಮೂಲಕ ಜಿಲ್ಲೆಯ ಜನರ ಮೇಲೆ ನಿಗಾವಹಿಸಲಾಗಿದೆ.
ರೆಡ್ಜೋನ್ ಏರಿಯಾಗಳ ಮೇಲೆ ಡ್ರೋನ್ ಕಣ್ಗಾವಲು: ಕಣ್ಮನ ಸೆಳೆಯುತ್ತಿದೆ ಪಕ್ಷಿನೋಟ - ರೆಡ್ಜೋನ್ ಏರಿಯಾಗಳ ಮೇಲೆ ಡ್ರೋನ್ ಕಣ್ಗಾವಲು
ಕಲಬುರಗಿ ನಗರದ 7 ರೆಡ್ ಜೋನ್ ಏರಿಯಾಗಳು, ಉತ್ತರ ಮತ ಕ್ಷೇತ್ರದ ಮೋಮಿನ್‌ಪುರ , ಸಂತ್ರಸವಾಡಿ, ಮುಸ್ಲಿಂ ಚೌಕ್ ಸೇರಿದಂತೆ ಸೀಲ್ ಡೌನ್ ಇರುವ ಪ್ರದೇಶಗಳ ಮೇಲೆ ಕಣ್ಗಾವಲಿಗಾಗಿ ಡ್ರೋನ್ ಕ್ಯಾಮೆರಾ ಅಳವಡಸಲಾಗಿದ್ದು, ಇದರಲ್ಲಿ ಸೆರೆಯಾದ ಸುಂದರ ಪಕ್ಷಿನೋಟ ಜಿಲ್ಲೆಯ ಜನರ ಕಣ್ಮನ ಸೆಳೆಯುತ್ತಿದೆ.
ದ್ರೋನ್ನಲ್ಲಿ ಸೆರೆಯಾದ ಕಲಬುರಗಿಯ ಸುಂದರ ದೃಶ್ಯಗಳು
ಉತ್ತರ ಮತ ಕ್ಷೇತ್ರದ ಮೋಮಿನ್‌ಪುರ , ಸಂತ್ರಸವಾಡಿ, ಮುಸ್ಲಿಂ ಚೌಕ್ ಸೇರಿದಂತೆ ಸೀಲ್ ಡೌನ್ ಇರುವ ಏರಿಯಾಗಳಲ್ಲಿ ಜನರ ಮೇಲೆ ನಿಗಾ ವಹಿಸಲು ಡ್ರೋನ್ ಕ್ಯಾಮೆರಾ ಬಳಸಲಾಗುತ್ತಿದೆ. ದಿನದ 24 ಗಂಟೆಗಳ ಕಾಲ ವಾಹನ ಹಾಗೂ ಜನರಿಂದ ತುಂಬಿರುತ್ತಿದ್ದ ನಗರದ ಈಗ ಸಂಪೂರ್ಣ ಸ್ತಬ್ಧಗೊಂಡಿದೆ. ರಸ್ತೆಗಳು ಬಿಕೋ ಎನ್ನುತ್ತಿವೆ.
ಇನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳು ನೋಡಲು ಸುಂದರವಾಗಿದ್ದು, ಶರಣಬಸವೇಶ್ವರ ದೇವಸ್ಥಾನದ ಅಪ್ಪಾ ಕೆರೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಡ್ರೋನ್ ಕ್ಯಾಮೆರಾದಿಂದ ತೆಗೆದ ಪಕ್ಷಿನೋಟ ಜಿಲ್ಲೆಯ ಜನರ ಕಣ್ಮನ ಸೆಳೆಯುತ್ತಿದೆ.