ಕರ್ನಾಟಕ

karnataka

ETV Bharat / city

ಜ. 30ರಂದು ಜಿಲ್ಲಾ ಕಾಂಗ್ರೆಸ್​​ ಸಮಿತಿಯಿಂದ ನಮ್ಮ ನಡಿಗೆ ಮಹಾತ್ಮ ಗಾಂಧಿ ಕಡೆಗೆ ಪಾದಯಾತ್ರೆ - ಕಲಬುರಗಿ ನಗರದಲ್ಲಿ ಪಾದಯಾತ್ರೆ

ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ದಿನ ಜ. 30ರಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ "ನಮ್ಮ ನಡಿಗೆ ಮಹಾತ್ಮ ಗಾಂಧಿ ಕಡೆಗೆ" ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಶರಣ ಪ್ರಕಾಶ ಪಾಟೀಲ ತಿಳಿಸಿದರು.

Kn_klb_01_gandi_smarane_ka10021
ಜ.30 ರಂದು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ, ನಮ್ಮ ನಡಿಗೆ ಮಹಾತ್ಮಾಗಾಂಧಿ ಕಡೆಗೆ ಪಾದಯಾತ್ರೆ

By

Published : Jan 29, 2020, 12:23 PM IST

ಕಲಬುರಗಿ:ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ದಿನ ಜ. 30ರಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ "ನಮ್ಮ ನಡಿಗೆ ಮಹಾತ್ಮ ಗಾಂಧಿ ಕಡೆಗೆ" ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಶರಣ ಪ್ರಕಾಶ ಪಾಟೀಲ ತಿಳಿಸಿದರು.

ಜ. 30 ರಂದು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಮ್ಮ ನಡಿಗೆ ಮಹಾತ್ಮ ಗಾಂಧಿ ಕಡೆಗೆ ಪಾದಯಾತ್ರೆ
ಗಾಂಧೀಜಿ ಹುತಾತ್ಮರಾದ ದಿನವಾದ ಜನವರಿ 30ರಂದು ಕಲಬುರಗಿ ನಗರದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗಾಂಧೀಜಿ ತತ್ವಕ್ಕೆ ವಿರುದ್ಧವಾಗಿ ಅಧಿಕಾರ ನಡೆಸುತ್ತಿದೆ. ಎಲ್ಲೆಡೆ ಅಶಾಂತಿ ನೆಲೆಸುವಂತೆ ಮಾಡಿದೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ನಗದಲ್ಲಿ 4 ಕಿಲೋ ಮೀಟರ್ ಪಾದಯಾತ್ರೆ ಕೈಗೊಳ್ಳಲಾಗುತ್ತದೆ. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಲಿರುವ ಜನತೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಅಲ್ಲದೇ ಯುವಪೀಳಿಗೆ ಹಿರಿಯರ ಮಾರ್ಗದರ್ಶನ - ತತ್ವಾದರ್ಶದೊಂದಿಗೆ ನಡೆಯಬೇಕಿದೆ ಎಂದು ಮನವಿ ಮಾಡಿದರು.

ABOUT THE AUTHOR

...view details