ಕರ್ನಾಟಕ

karnataka

ETV Bharat / city

ಪುನೀತ್ ರಾಜ್​ಕುಮಾರ್​ ಅವರನ್ನು ಮರಳಿ ಕಳುಹಿಸು ಪ್ರಭುವೇ.. ಹುಂಡಿಯಲ್ಲಿ ಸಿಕ್ಕ ಅಭಿಮಾನಿಯ ಚೀಟಿ - Puneeth Rajkumar fan wrote letter to god

ಪುನೀತ್ ರಾಜ್​​ಕುಮಾರ್ ಅವರನ್ನು ಮರಳಿ ಕಳುಹಿಸು ಪ್ರಭುವೇ ಎಂದು ಅಪ್ಪು ಅಭಿಮಾನಿಯೋರ್ವರು ಬರೆದು ದೇವರ ಹುಂಡಿಯಲ್ಲಿ ಹಾಕಿರುವ ಚೀಟಿ ಸಿಕ್ಕಿದೆ..

devotee pray with god as bring back Puneeth Rajkumar
ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ

By

Published : Mar 27, 2022, 1:00 PM IST

Updated : Mar 28, 2022, 11:12 AM IST

ಕಲಬುರಗಿ: ಕನ್ನಡ ಚಿತ್ರರಂಗದ ಯುವರತ್ನ ಪುನೀತ್​ ರಾಜ್​ಕುಮಾರ್ ನಮ್ಮನ್ನೆಲ್ಲ ಅಗಲಿ ತಿಂಗಳುಗಳೇ ಉರುಳಿವೆ. ಆದರೆ, ಅಪ್ಪು ನೆನಪಲ್ಲಿ ಅದೆಷ್ಟೋ ಒಳ್ಳೆ ಕಾರ್ಯಗಳು ನಿತ್ಯವೂ ನಡೆಯುತ್ತಿವೆ. ​ಅಭಿಮಾನಿಗಳ ಹೃದಯದಲ್ಲಿ ಅಪ್ಪು ಅಜರಾಮರ. ಇದೀಗ ಪುನೀತ್ ರಾಜ್​​ಕುಮಾರ್ ಅವರನ್ನು ಮರಳಿ ಕಳುಹಿಸು ಪ್ರಭುವೇ ಎಂದು ಅಭಿಮಾನಿಯೋರ್ವರು ಬರೆದು ದೇವರ ಹುಂಡಿಯಲ್ಲಿ ಹಾಕಿರುವ ಚೀಟಿ ಸಿಕ್ಕಿದೆ.

ಹುಂಡಿಯಲ್ಲಿ ಸಿಕ್ಕ ಅಭಿಮಾನಿಯ ಚೀಟಿ

ಇದನ್ನೂ ಓದಿ:ರಾಜ್​​ ಕುಟುಂಬದ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ : ಅಪ್ಪು ಫೋಟೋ ಮುಂದೆ ಕ್ಷಮೆ ಕೇಳಿದ ವ್ಯಕ್ತಿ

ಕಲಬುರಗಿಯ ಅಫಜಲಪುರ ತಾಲೂಕಿನ ಸುಪ್ರಸಿದ್ಧ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಹುಂಡಿಯಲ್ಲಿ ಪುನೀತ್ ರಾಜ್​ಕುಮಾರ್ ಅವರನ್ನು ಮರಳಿ ಕಳುಹಿಸು ಪ್ರಭು ಎಂದು ಬರೆದ ಚೀಟಿ ಸಿಕ್ಕಿದೆ. ದೇವಸ್ಥಾನದ ಹುಂಡಿ ಎಣಿಕೆ ಸಂದರ್ಭದಲ್ಲಿ ಈ ಚೀಟಿ ದೊರೆತಿದೆ. ಅಪ್ಪು ಅವರನ್ನು ಮತ್ತೆ ಕಳುಹಿಸಿ ಎಂದು ದೇವರ ಮೊರೆ ಹೋಗಿರುವ ಈ ವಿಚಾರ ಭಾವನಾತ್ಮಕವಾಗಿದೆ.

Last Updated : Mar 28, 2022, 11:12 AM IST

ABOUT THE AUTHOR

...view details