ಕರ್ನಾಟಕ

karnataka

ETV Bharat / city

Omicron fear : ದೇವಲ ಗಾಣಗಾಪುರ ದತ್ತಾತ್ರೇಯ ರಥೋತ್ಸವ ರದ್ದು - ಗಾಣಗಾಪುರ ದತ್ತಾತ್ರೇಯ ರಥೋತ್ಸವ ರದ್ದು

ನೆರೆಯ ಮಹಾರಾಷ್ಟ್ರದಲ್ಲಿ ಒಮಿಕ್ರಾನ ಭೀತಿ ಹೆಚ್ಚಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಸುಕ್ಷೇತ್ರ ದೇವಲ ಗಾಣಗಾಪುರದ ಶ್ರೀದತ್ತ ಜಯಂತಿ ಹಾಗೂ ರಥೋತ್ಸವ ಕಾರ್ಯಕ್ರಮ ರದ್ದುಗೊಳಿಸಿ ಜಿಲ್ಲಾಡಳಿತ ಆದೇಶಿಸಿದೆ..

devala-ganagapur-fair
ದೇವಲ ಗಾಣಗಾಪುರ ದತ್ತಾತ್ರೇಯ

By

Published : Dec 17, 2021, 9:13 AM IST

ಕಲಬುರಗಿ : ಕೋವಿಡ್ ರೂಪಾಂತರಿ ಒಮಿಕ್ರಾನ ಭೀತಿ ಹಿ‌ನ್ನೆಲೆ ಸುಕ್ಷೇತ್ರ ದೇವಲ ಗಾಣಗಾಪುರದ ಶ್ರೀದತ್ತ ಜಯಂತಿ ಹಾಗೂ ರಥೋತ್ಸವ ಕಾರ್ಯಕ್ರಮ ರದ್ದುಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ದೇವಲ ಗಾಣಗಾಪುರ ದತ್ತಾತ್ರೇಯ ರಥೋತ್ಸವ ರದ್ದು..

ಡಿಸೆಂಬರ್ 18ರಂದು ದತ್ತ ಮಹಾರಾಜರ ಜನ್ಮೋತ್ಸವ (ತೊಟ್ಟಿಲು) ಕಾರ್ಯಕ್ರಮ, ಡಿಸೆಂಬರ್ 19ರಂದು ದತ್ತ ಜಯಂತಿ ಹಾಗೂ ರಥೋತ್ಸವ ಕಾರ್ಯಕ್ರಮ ನಡೆಯಬೇಕಿತ್ತು. ಪ್ರತಿವರ್ಷ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ರೂಢಿ ಇದೆ.

ನೆರೆಯ ಮಹಾರಾಷ್ಟ್ರದಲ್ಲಿ ಒಮಿಕ್ರಾನ ಭೀತಿ ಹೆಚ್ಚಿರುವ ಹಿನ್ನೆಲೆ ಹಾಗೂ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಜಾತ್ರೆಗೆ ನಿಷೇಧ ಹೇರಿದೆ. ಅರ್ಚಕರು ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ದೇಗುಲದ ಆವರಣದಲ್ಲೇ ಸರಳವಾಗಿ ಜಾತ್ರೆ ಆಚರಿಸಲು ಮಾತ್ರ ಅನುಮತಿ ನೀಡಲಾಗಿದೆ. ಭಕ್ತರು ದೇಗುಲಕ್ಕೆ ಬರಬಾರದು ಎಂದು ಮನವಿ ಮಾಡಲಾಗಿದೆ.

ABOUT THE AUTHOR

...view details