ಕರ್ನಾಟಕ

karnataka

ETV Bharat / city

ರೈತನಿಗೆ ಸಿಗದ ಪರಿಹಾರ : ಕಲಬುರಗಿ ಡಿಸಿ ಕಾರು ಜಪ್ತಿಗೆ ಕೋರ್ಟ್ ಆದೇಶ - ಕಲಬುರಗಿ ಡಿಸಿ ಕಾರು ಜಪ್ತಿಗೆ ಕೋರ್ಟ್ ಆದೇಶ

2008ರಲ್ಲಿ ರೈತ ಕಲ್ಲಪ್ಪ ಮೇತ್ರೆಯ 33 ಗುಂಟೆ ಜಮೀನು ಭೀಮಾ‌ ಏತ ನೀರಾವರಿ ಯೋಜನೆಯಲ್ಲಿ ಮುಳುಗಡೆಯಾಗಿತ್ತು. ಮುಳುಗಡೆಯಾದ ಜಮೀನಿಗೆ 7,39,632 ರೂ. ಪರಿಹಾರ ನೀಡವಂತೆ ಕೋರ್ಟ್ ಆದೇಶ ಮಾಡಿತ್ತು..

ಕಲಬುರಗಿ ಡಿಸಿ ಕಾರು ಜಪ್ತಿಗೆ ಕೋರ್ಟ್ ಆದೇಶ
ಕಲಬುರಗಿ ಡಿಸಿ ಕಾರು ಜಪ್ತಿಗೆ ಕೋರ್ಟ್ ಆದೇಶ

By

Published : Feb 15, 2022, 1:59 PM IST

Updated : Feb 15, 2022, 2:33 PM IST

ಕಲಬುರಗಿ :ರೈತನಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕಲುಬುರಗಿ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡಿಕೊಳ್ಳುವಂತೆ ಇಲ್ಲಿನ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಲಯ ಆದೇಶಿಸಿದೆ.

ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಕಲ್ಲಪ್ಪ ಮೇತ್ರೆ ಎಂಬ ರೈತನಿಗೆ ಪರಿಹಾರ ನೀಡುವಲ್ಲಿ ವಿಳಂಬವಾದ ಕಾರಣಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರ ಸರ್ಕಾರಿ ಕಾರು ಜಪ್ತಿಗೆ ಕೋರ್ಟ್ ಆದೇಶ ನೀಡಿದೆ.

ಏನಿದು ಪ್ರಕರಣ?

2008ರಲ್ಲಿ ರೈತ ಕಲ್ಲಪ್ಪ ಮೇತ್ರೆಯ 33 ಗುಂಟೆ ಜಮೀನು ಭೀಮಾ‌ ಏತ ನೀರಾವರಿ ಯೋಜನೆಯಲ್ಲಿ ಮುಳುಗಡೆಯಾಗಿತ್ತು. ಮುಳುಗಡೆಯಾದ ಜಮೀನಿಗೆ 7,39,632 ರೂ. ಪರಿಹಾರ ನೀಡವಂತೆ ಕೋರ್ಟ್ ಆದೇಶ ಮಾಡಿತ್ತು.

ರೈತನಿಗೆ ಸಿಗದ ಪರಿಹಾರ : ಕಲಬುರಗಿ ಡಿಸಿ ಕಾರು ಜಪ್ತಿಗೆ ಕೋರ್ಟ್ ಆದೇಶ

ಕೋರ್ಟ್ ಆದೇಶ ಮಾಡಿದ್ರೂ ಪರಿಹಾರ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಕಾರು ಜಪ್ತಿಗೆ ಇದೀಗ ಕೋರ್ಟ್ ಆದೇಶ‌ ಮಾಡಿದೆ. ಅಂತೆಯೇ ಕಾರು ಜಪ್ತಿಗೆ ಕೋರ್ಟ್ ಸಿಬ್ಬಂದಿ ಮತ್ತು ವಕೀಲರು ಆಗಮಿಸಿದ್ದಾರೆ.

Last Updated : Feb 15, 2022, 2:33 PM IST

For All Latest Updates

TAGGED:

ABOUT THE AUTHOR

...view details