ಕಲಬುರಗಿ: ರಾಜ್ಯದಲ್ಲಿನ ಸಾರಿಗೆ ವ್ಯವಸ್ಥೆಯನ್ನು ಮತ್ತಷು ಉತ್ತಮಪಡಿಸಲು ಬಿ.ಎಸ್-6 ಮಾದರಿಯ 665 ಮತ್ತು 900 ಎಲೆಕ್ಟ್ರಿಕ್ ಬಸ್ ಸೇರಿ 1500ಕ್ಕೂ ಹೆಚ್ಚು ಬಸ್‍ಗಳನ್ನು ಖರೀದಿ ಮಾಡಲಾಗುತ್ತಿದೆ. ಕಳೆದ 9-10 ವರ್ಷದಿಂದ ಬಸ್‍ಗಳು ಓಡುತ್ತಿದ್ದು ಹಳೆಯದಾಗಿವೆ. ಹೀಗಾಗಿ ಹೊಸದಾಗಿ ಬಸ್ ಖರೀದಿಗೆ ನಿರ್ಧರಿಸಿದೆ ಎಂದು ಸಾರಿಗೆ ಮತ್ತು ಪರಿಶಿಷ್ಡ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಾರಿಗೆ ಇಲಾಖೆಯಲ್ಲಿ 635 ರಲ್ಲಿ 165 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತಿದೆ. 8,500 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ. ಇದರ ಮಧ್ಯೆ ಆರ್.ಟಿ.ಒ. ಕಚೇರಿಯಲ್ಲಿ ಕಲಿಕಾ ಪರವಾನಗಿ, ನವೀಕರಣ ಹೀಗೆ 30 ಸೇವೆಗಳನ್ನು ಆನ್‍ಲೈನ್ ಮೂಲಕ ವ್ಯವಹರಿಸಲಾಗುತ್ತಿದೆ.