ಕರ್ನಾಟಕ

karnataka

ETV Bharat / city

ಅಭಿವೃದ್ಧಿ ಹೆಸರಲ್ಲಿ ತಾರತಮ್ಯ ನಡೆದಿಲ್ಲ: ಸವದಿ ಸ್ಪಷ್ಟನೆ - ಕಲಬುರಗಿ ಸುದ್ದಿ

ಅಭಿವೃದ್ಧಿ ಬಗ್ಗೆ ತಾರಾತಮ್ಯ ನಡೆದಿಲ್ಲ. ಈ ವಿಚಾರದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಇಡುವುದು ಸರಿಯಲ್ಲ ಎಂದು ಡಿಸಿಎಂ ಸವದಿ ಲಕ್ಷ್ಮಣ ಸವದಿ ಹೇಳಿದ್ದಾರೆ‌.

DCM lakshman savadi
ಡಿಸಿಎಂ ಸವದಿ ಲಕ್ಷ್ಮಣ ಸವದಿ

By

Published : Feb 18, 2021, 1:20 PM IST

ಕಲಬುರಗಿ:ಅಭಿವೃದ್ಧಿ ಬಗ್ಗೆ ತಾರಾತಮ್ಯ ನಡೆದಿಲ್ಲ. ಐಐಟಿ ಬಂದಾಗ ಧಾರವಾಡ ಮತ್ತು ರಾಯಚೂರಿಗೆ ಆದ್ಯತೆ ಕೊಟ್ಟಿದ್ದೇವೆ ಎಂದು ಡಿಸಿಎಂ ಸವದಿ ಲಕ್ಷ್ಮಣ ಸವದಿ ಹೇಳಿದ್ದಾರೆ‌.

ಕಲಬುರಗಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಏಮ್ಸ್‌ಗೆ ಎಲ್ಲರ ಬೇಡಿಕೆ ಇರುತ್ತದೆ. ಈ ಬಗ್ಗೆ ನಿರ್ಣಯ ತೆಗೆದುಕೊಳ್ಳೊದು ಕೇಂದ್ರ ಸರ್ಕಾರ. ಹೀಗಾಗಿ ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ ಎಂದು ಹೇಳಿದರು.

ಡಿಸಿಎಂ ಸವದಿ ಲಕ್ಷ್ಮಣ ಸವದಿ

ಪ್ರತ್ಯೇಕ ರಾಜ್ಯದ ಬಗ್ಗೆ ಇಷ್ಟು ಮಹತ್ವ ಕೊಡುವುದು ಸರಿಯಲ್ಲ. ನಮ್ಮ ಪೂರ್ವಜರು ಅಖಂಡ ಕರ್ನಾಟಕಕ್ಕೆ ಸಾಕಷ್ಟು ಪರಿಶ್ರಮ ವಹಿಸಿದ್ದಾರೆ. ಕಲ್ಯಾಣ ಕರ್ನಾಟಕ ಅಂತಾ ನಾಮಕರಣ ಮಾಡಿರೋದು ಕಲ್ಯಾಣ ಆಗಲಿ ಎಂದು. ಕಲ್ಯಾಣ ಕರ್ನಾಟಕ ಶ್ರೀಮಂತ ಆಗಲಿ ಎಂಬುದೇ ನಮ್ಮ ಆಶಯ. ಆಶಾವಾದ ಇರಬೇಕು ನಿರಾಶಾವಾದ ಬೇಡ. ಕೊರೊನಾದಿಂದ ಸಾಕಷ್ಟು ಹಣಕಾಸಿನ ತೊಂದರೆ ಆಗಿದೆ. ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ABOUT THE AUTHOR

...view details