ಕರ್ನಾಟಕ

karnataka

ETV Bharat / city

ಜಿಮ್ಸ್​ ಆಸ್ಪತ್ರೆಗೆ ಡಿಸಿ ದಿಢೀರ್​ ಭೇಟಿ.. ಹಂದಿಗಳ ಸ್ಥಳಾಂತರಕ್ಕೆ ಸೂಚನೆ - ಜಿಮ್ಸ್​ ಆಸ್ಪತ್ರೆಗೆ ಡಿಸಿ ಶರತ್​ ಭೇಟಿ

ಹಂದಿ ಸಾಕಾಣಿಕೆದಾರರಿಗೆ ಹಾಗೂ ಮಾಲೀಕರ ಮೇಲೆ ಎಫ್‌ಐಆರ್ ದಾಖಲಿಸಲು ಡಿಸಿ ಶರತ್ ಬಿ. ಜಿಮ್ಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ..

dc-sharat-visited-gims-hospital
ಜಿಮ್ಸ್​ ಆಸ್ಪತ್ರೆ

By

Published : Jul 18, 2020, 9:44 PM IST

ಕಲಬುರಗಿ: ನಗರದ ಜಿಮ್ಸ್​​ ಆಸ್ಪತ್ರೆಗೆ ಜಿಲ್ಲಾಧಿಕಾರಿ ಬಿ ಶರತ್ ಅವರು ಹಠಾತ್ ಭೇಟಿ ಆವರಣದಲ್ಲಿದ್ದ ಹಂದಿಗಳ ಸ್ಥಳಾಂತರಕ್ಕೆ ಖಡಕ್ ಸೂಚನೆ ನೀಡಿದ್ದಾರೆ.

ಜಿಮ್ಸ್​ ಆಸ್ಪತ್ರೆಗೆ ಡಿಸಿ ದಿಢೀರ್​ ಭೇಟಿ

ಕೋವಿಡ್(ಜಿಮ್ಸ್) ಆಸ್ಪತ್ರೆಗೆ ಹೊಂದಿಕೊಂಡಿರುವ ಜಿಲ್ಲಾಸ್ಪತ್ರೆಯಲ್ಲಿ ಹಂದಿಗಳ ಹಿಂಡು ಬಿಂದಾಸ್ ಓಡಾಟ ನಡೆಸುತ್ತಿರುವುದನ್ನು ಕಂಡು ಹಾಗೂ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಕುರಿತು ಈಟಿವಿ ಭಾರತ ವರದಿ ಬಿತ್ತರಿಸಿದ ಬೆನ್ನಲೇ ಇಂದು ಆಸ್ಪತ್ರೆಗೆ ಭೇಟಿ ನೀಡಿದ ಡಿಸಿ ಅವರು ಹಂದಿ ಸ್ಥಳಾಂತರಕ್ಕೆ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಹಂದಿ ಸಾಕಾಣಿಕೆದಾರರಿಗೆ ಹಾಗೂ ಮಾಲೀಕರ ಮೇಲೆ ಎಫ್‌ಐಆರ್ ದಾಖಲಿಸಲು ಡಿಸಿ ಶರತ್ ಬಿ. ಜಿಮ್ಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ABOUT THE AUTHOR

...view details