ಕಲಬುರಗಿ:ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಕಲಬುರಗಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದ್ದು, ನಿನ್ನೆ ಸ್ವತಃ ಜಿಲ್ಲಾಧಿಕಾರಿ ರಸ್ತೆಗೆ ಇಳಿದು ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಿದರು.
ಇಡೀ ದಿನ ಜನರಲ್ಲಿ ಜಾಗೃತಿ ಮೂಡಿಸಿದ ಡಿಸಿ ನಿನ್ನೆ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಪ್ರಮುಖ ರಸ್ತೆಗಳು, ಪಟೇಲ್ ವೃತ್ತ, ಜಗತ್ ಸರ್ಕಲ್, ಸುಪರ್ ಮಾರ್ಕೆಟ್ ಪ್ರದೇಶಗಳಲ್ಲಿ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ಜನರಲ್ಲಿ ಕೊರೊನಾದಿಂದ ರಕ್ಷಣೆಗಾಗಿ ಜಾಗೃತಿ ಮೂಡಿಸಿದರು. ಮಾಸ್ಕ್ ನೀಡಿ ಕೆಲವರಿಗೆ ದಂಡ ಕೂಡಾ ವಿಧಿಸಿದರು. ಜಿಲ್ಲಾಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಸತೀಶಕುಮಾರ, ಪಾಲಿಕೆ ಆಯುಕ್ತ ಸಾಥ್ ನೀಡಿದರು.
ನಿಮ್ಮ ರಕ್ಷಣೆಗೆ ಮಾಸ್ಕ್ ಹಾಕೊಳ್ಳಿ...
ಅಧಿಕಾರಿಗಳನ್ನು ಕಂಡ ಜನತೆ ತಮ್ಮ ಬಳಿ ಇರುವ ಕೈವಸ್ತ್ರ, ಟವಲ್, ಶಲ್ಯೆ, ದುಪ್ಪಟ್ಟದಿಂದ ಮೂಗು ಮುಚ್ಚಿಕೊಳ್ಳಲು ಆರಂಭಿಸಿದರು. ಇದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ನಮ್ಮನ್ನ ನೋಡಿ ಮಾಸ್ಕ್ ಹಾಕುವುದಲ್ಲ, ನಿಮ್ಮ ರಕ್ಷಣೆಗೆ ಮಾಸ್ಕ್ ಹಾಕೊಳ್ಳಿ ಎಂದು ತಮ್ಮ ಬಳಿ ಇದ್ದ ಮಾಸ್ಕ್ಗಳನ್ನು ಜನರಿಗೆ ನೀಡಿ ತಿಳಿ ಹೇಳಿದರು.
ಇಡೀ ದಿನ ಜನರಲ್ಲಿ ಜಾಗೃತಿ ಮೂಡಿಸಿದ ಡಿಸಿ ಮೇಡಂ ಮಗು ನನಗೆ ಕೊಟ್ಟು ನೀನು ಮಾಸ್ಕ್ ಹಾಕೊಳ್ಳಮ್ಮ...
ಇಡೀ ದಿನ ಜನರಲ್ಲಿ ಜಾಗೃತಿ ಮೂಡಿಸಿದ ಡಿಸಿ ಮೇಡಂ ಜಗತ್ ವೃತ್ತದಲ್ಲಿ ಮಾಸ್ಕ್ ಕುರಿತು ಜಾಗೃತಿ ನಡೆಸುತ್ತಿದ್ದಾಗ ಮಹಿಳೆಯೊಬ್ಬಳು ತನ್ನ ಮಗುವಿನೊಂದಿಗೆ ಮಾಸ್ಕ್ ಹಾಕದೇ ಕುಳಿತಿದ್ದರು. ಇದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಮಗು ನನ್ನ ಕೈಗೆ ಕೊಟ್ಟು ನೀನು ಮಾಸ್ಕ್ ಹಾಕಿಕೊಳಮ್ಮ ಅಂತ ತಾಯಿಯಿಂದ ಮಗುವನ್ನು ಎತ್ತಿಕೊಂಡು ಗಮನ ಸೆಳೆದರು.
ಮಾಲ್ಪೂರಿಗೆ ಡಿಸಿ ಫೀದಾ...
ಇಡೀ ದಿನ ಜನರಲ್ಲಿ ಜಾಗೃತಿ ಮೂಡಿಸಿದ ಡಿಸಿ ಮೇಡಂ ಖವಾದಿಂದ ತಯಾರಿಸುವ ಕಲಬುರಗಿ ಜಿಲ್ಲೆಯ ಫೇಮಸ್ ಮಾಲ್ಪೂರಿಗೆ ಜಿಲ್ಲಾಧಿಕಾರಿಗಳು ಫಿದಾ ಆದರು. ಕೊರೊನಾ ಜಾಗೃತಿ ಮೂಡಿಸುತ್ತ ಸುಪರ್ ಮಾರ್ಕೆಟ್ ಪ್ರದೇಶದ ಮಾಮೂ ಮಾಲ್ಪೂರಿ ಅಂಗಡಿ ಬಳಿ ತೆರಳಿದಾಗ ಸಿಬ್ಬಂದಿ ಅಲ್ಲಿನ ಮಾಲ್ಪೂರಿ ಸ್ಪೆಷಲ್ ಬಗ್ಗೆ ಡಿಸಿ ಅವರ ಗಮನಕ್ಕೆ ತಂದರು. ಆಗ ಡಿಸಿ ಹಾಗೂ ನಗರ ಪೊಲೀಸ್ ಆಯುಕ್ತರು ಮಾಮೂ ಮಾಲ್ಪೂರಿ ಅಂಗಡಿಯಲ್ಲಿ ಮಾಲ್ಪೂರಿ ಸವಿದರು. ಸಿಬ್ಬಂದಿ ಜೊತೆಗೆ ಮಾಧ್ಯಮದವರಿಗೂ ಮಾಲ್ಪೂರಿ ನೀಡಿದರು. ಅಂಗಡಿಯವರು ಹಣ ಪಡೆಯದಿದ್ದಾಗ ಅವರ ಮನವೊಲಿಸಿ 500 ರೂಪಾಯಿ ಹಣ ನೀಡಿದರು.
ಮಗುವಿಗೆ ಚಪ್ಪಲಿ ಕೊಡಿಸಿದ ಪಾಲಿಕೆ ಆಯುಕ್ತರು...
ಇಡೀ ದಿನ ಜನರಲ್ಲಿ ಜಾಗೃತಿ ಮೂಡಿಸಿದ ಡಿಸಿ ಮೇಡಂ ಸೂಪರ್ ಮಾರ್ಕೆಟ್ನ ಚಪ್ಪಲ್ ಬಜಾರ್ನಲ್ಲಿ ಬಾಲಕನೊಬ್ಬ ಮಾಸ್ಕ್ ಧರಿಸಿದ್ದರೂ ಸುಡು ಬಿಸಿಲಿನಲ್ಲಿ ಬರಿಗಾಲಲ್ಲಿ ಸಾಗುವುದನ್ನು ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ನೋಡಿದ್ದಾರೆ. ಬಳಿಕ ಬಾಲಕನ ಸ್ಥಿತಿ ಅರಿತ ಆಯುಕ್ತ ಅಲ್ಲಿಯೇ ಇದ್ದ ಅಂಗಡಿಯಲ್ಲಿ ಚಪ್ಪಲಿ ಕೊಡಿಸಿದರು. ಈ ವೇಳೆ ಚಪ್ಪಲಿ ಕೊಡಿಸಲು ಕರೆದುಕೊಂಡು ಹೋಗುವಾಗ ಭಯಭೀತವಾಗಿ ಬಿಕ್ಕಿ-ಬಿಕ್ಕಿ ಅಳುತ್ತಿದ್ದ ಪುಟ್ಟ ಹುಡುಗ, ಚಪ್ಪಲಿ ಕೊಡಿಸಿದ ಬಳಿಕ ಖುಷಿಯಿಂದ ತನ್ನ ತಾಯಿಯೊಂದಿಗೆ ಹೆಜ್ಜೆಹಾಕಿ ಹೊರಟ.
ಒಟ್ನಲ್ಲಿ ಡಿಸಿ ಮತ್ತು ಪಾಲಿಕೆ ಅಧಿಕಾರಿಗಳು ನಗರವೆಲ್ಲ ಸುತ್ತಾಡಿ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದು ಪ್ರಶಂಸಗೆ ಪಾತ್ರವಾಗಿದೆ.