ಕರ್ನಾಟಕ

karnataka

ETV Bharat / city

ನಾವು ಜಾತಿ ಲೆಕ್ಕಾಚಾರ ಇಡಲ್ಲ, ನೀತಿ ಮೂಲಕ ರಾಜಕೀಯ ಮಾಡ್ತೀವಿ: ಡಿಕೆಶಿ

ಸಿಂದಗಿ ಮತ್ತು ಹಾನಗಲ್​ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

d k shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

By

Published : Oct 16, 2021, 11:56 AM IST

Updated : Oct 16, 2021, 12:11 PM IST

ಕಲಬುರಗಿ: ನಾವು ಜಾತಿ ಮೇಲೆ ಲೆಕ್ಕಾಚಾರ ಇಟ್ಟು ರಾಜಕೀಯ ಮಾಡಲ್ಲ, ನೀತಿ ಮೂಲಕ ರಾಜಕೀಯ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಂದಗಿ ಮತ್ತು ಹಾನಗಲ್​ನಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಸಚಿವ ಮನಗೂಳಿ ನಿಧನಕ್ಕೂ ಮೊದಲು ಡಿಕೆಶಿ ಭೇಟಿ ಮಾಡಿರಲಿಲ್ಲ ಅನ್ನೋ ಕುಮಾರಸ್ವಾಮಿ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ಮನಗೂಳಿ ಇಂದು ನಮ್ಮೊಂದಿಗಿಲ್ಲ. ಅವರ ಮಗ ಇದ್ದಾರೆ. ಸಾಯುವ ಮುನ್ನ ಸ್ವತಃ ಮನಗೂಳಿ ಅವರೇ ನನ್ನ ಮಗನ ಜವಾಬ್ದಾರಿ ನಿಮ್ಮದು. ಅವನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆಂದಿದ್ದರು.

ಹೀಗಾಗಿ ಸಿಂದಗಿ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ. ಸಿಂದಗಿಯಲ್ಲಿ ಕಾಂಗ್ರೆಸ್​​ ಸಮೂಹ ಒಗ್ಗಟ್ಟಾಗಿ ಅಶೋಕ ಮನಗೂಳಿ ಅವರ ಗೆಲುವಿಗೆ ಶ್ರಮಿಸಲಿದೆ‌. ಅಲ್ಪಸಂಖ್ಯಾತರು ಪ್ರಜ್ಞಾವಂತರಿದ್ದಾರೆ. ಯಾರಿಗೆ ಮತ ಹಾಕಿದರೆ ಉತ್ತಮ ಅನ್ನೋದು ಅವರಿಗೆ ಗೊತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:ಉಪ ಚುನಾವಣೆಗಳಲ್ಲಿ ಗೆಲ್ಲುವ ವಿಶ್ವಾಸವಿದೆ: ಸಿಎಂ ಬಸವರಾಜ ಬೊಮ್ಮಾಯಿ

ಇದೇ ವೇಳೆ, ಸಿಎಂ ಇಬ್ರಾಹಿಂ ಅವರ ದಲಿತರಿಗೆ, ಮುಸ್ಲಿಂಮರಿಗೆ ಸಿಎಂ ಸ್ಥಾನ ನೀಡಿದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂಬ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅವರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ, ತಿಳಿದುಕೊಂಡು ಮಾತನಾಡುತ್ತೇನೆ ಎಂದರು. ಸಲೀಂ ಹೇಳಿಕೆ ವಿಚಾರವಾಗಿ ಏನೂ ಪ್ರತಿಕ್ರಿಯಿಸಲಿಲ್ಲ.

Last Updated : Oct 16, 2021, 12:11 PM IST

ABOUT THE AUTHOR

...view details