ಕಲಬುರಗಿ: ಜಿಲ್ಲೆಯಲ್ಲಿ ಶಂಕಿತ ಕೊರೊನಾ ವೈರಸ್ ನಿಂದ ವೃದ್ಧ ಮೃತಪಟ್ಟು ರಾಜ್ಯದಾದ್ಯಂತ ಆತಂಕ ಸೃಷ್ಟಿಯಾಗಿತ್ತು. ಈ ಕುರಿತು ಸುದ್ದಿಗೋಷ್ಠಿ ಕರೆದಿದ್ದ ಜಿಲ್ಲಾಧಿಕಾರಿ ಬಿ.ಶರತ್ ಲ್ಯಾಬ್ ವರದಿ ಇನ್ನೂ ಬಂದಿಲ್ಲ, ಅದಕ್ಕಾಗಿ ಕಾಯುತ್ತಿರುವದಾಗಿ ಮಾಹಿತಿ ನೀಡಿದರು.
ಕೊರೊನಾ ಶಂಕಿತ ಮೃತ ವೃದ್ಧನ ಲ್ಯಾಬ್ ವರದಿ ಬಂದಿಲ್ಲ: ಜಿಲ್ಲಾಧಿಕಾರಿ ಬಿ.ಶರತ್
ಕಲಬುರಗಿಯಲ್ಲಿ ಶಂಕಿತ ಕೊರೊನಾದಿಂದ ಸಾವಿಗೀಡಾಗಿದ್ದರು ಎನ್ನಲಾಗಿದ್ದ ವೃದ್ಧರೊಬ್ಬರ ಲ್ಯಾಬ್ ರಿಪೋರ್ಟ್ ಇನ್ನೂ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಬಿ. ಶರತ್ ತಿಳಿಸಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆ ನಗರದ ಇಎಸ್ಐ ಆಸ್ಪತ್ರೆಯಲ್ಲಿ 200 ಬೆಡ್ಗಳ ಐಸೋಲೇಶನ್ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಬಿದ್ದರೆ ಇನ್ನೂ 200 ಬೆಡ್ ವ್ಯವಸ್ಥೆ ಮಾಡಲಾಗುವುದು, ಖಾಲಿ ಇರುವ ಹಾಸ್ಟೆಲ್ ಗಳನ್ನು ವಾರ್ಡ್ ಗಳಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಡಿಸಿ ತಿಳಿಸಿದರು. ಕೆಮ್ಮು, ಜ್ವರ, ನೆಗಡಿ ಬಂದರೆ ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು. ಪ್ರವಾಸೋದ್ಯಮ ಇಲಾಖೆ ಮತ್ತು ಹೋಟೆಲ್ ಮಾಲೀಕರಿಗೆ ಲಾಡ್ಜ್ ಗಳಲ್ಲಿ ಬೆಡ್ ಬಟ್ಟೆಗಳನ್ನು ಸ್ವಚ್ಛವಾಗಿ ಇಡುವಂತೆ ಸೂಚಿಸಲಾಗಿದೆ. ಇಲ್ಲಿಯ ವರೆಗೆ ಜಿಲ್ಲೆಯಲ್ಲಿ ನಲವತ್ತು ಮೂರು ಜನರಿಗೆ ಐಸೋಲೇಶನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೇರೆ ದೇಶಗಳಿಂದ ಬರುವವರಿಗೆ ಮತ್ತು ತೆರಳುವವರಿಗೆ ವೀಸಾ ಬಂದ್ ಮಾಡಲಾಗಿದೆ ಎಂದು ತಿಳಿಸಿದರು.