ಕಲಬುರ್ಗಿ :ಆರೋಗ್ಯ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ಓಡಿಹೋಗಲು ಯತ್ನಿಸಿದ ಕೊರೊನಾ ಸೋಂಕಿತ ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕಲಬುರ್ಗಿ : ಅಧಿಕಾರಿಗಳ ಕಣ್ತಪ್ಪಿಸಿ ಓಡಿಹೋಗಲೆತ್ನಿಸಿದ್ದ ಸೋಂಕಿತ ಮಹಿಳೆ ಪತ್ತೆ - ಕೊರೊನಾ ಸೋಂಕಿತ ಮಹಿಳೆ ಪತ್ತೆ
ಕ್ವಾರಂಟೈನ್ ಬಳಿಕ ಮನೆಗೆ ತೆರಳಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ಇರುವುದು ಧೃಢಪಟ್ಟಿದೆ. ಇದನ್ನು ತಿಳಿದ ಮಹಿಳೆ ಯಾರಿಗೂ ಗೊತ್ತಾಗದಂತೆ ಜೇವರ್ಗಿ ಬಳಿಯ ಶಖಾಪುರದ ತಮ್ಮ ಗಂಡನ ಮನೆಗೆ ಹೋಗಲು ಟಂಟಂ ವಾಹನದಲ್ಲಿ ಸಿದ್ದಳಾಗಿದ್ದಳು.
ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದಿಂದ ವಾಪಸಾದ ಸೋಂಕಿತ ಮಹಿಳೆಯನ್ನ ಏಳು ದಿನಗಳ ಕಾಲ ಚಿತ್ತಾಪುರದ ಕ್ವಾರಂಟೈನ್ ಸೆಂಟರ್‌ನಲ್ಲಿರಿಸಲಾಗಿತ್ತು. ಕ್ವಾರಂಟೈನ್ ಮುಗಿಸಿ ತಮ್ಮ ಸ್ವಂತ ಮನೆಗೆ ತೆರಳಿದ್ದ ಮಹಿಳೆಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮನೆಯಿಂದ ಹೊರಗೆ ಬಾರದಂತೆ ಸೂಚಿಸಿದ್ದರು. ಕ್ವಾರಂಟೈನ್ ಬಳಿಕ ಮನೆಗೆ ತೆರಳಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ಇರುವುದು ಧೃಢಪಟ್ಟಿದೆ. ಇದನ್ನು ತಿಳಿದ ಮಹಿಳೆ ಯಾರಿಗೂ ಗೊತ್ತಾಗದಂತೆ ಜೇವರ್ಗಿ ಬಳಿಯ ಶಖಾಪುರದ ತಮ್ಮ ಗಂಡನ ಮನೆಗೆ ಹೋಗಲು ಟಂಟಂ ವಾಹನದಲ್ಲಿ ಸಿದ್ದಳಾಗಿದ್ದಳು.
ಇದಕ್ಕೂ ಮುನ್ನ ವಾಡಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವಾಗ, ಅನುಮಾನ ಬಂದ ಅಲ್ಲಿನ ವೈದ್ಯರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಆಸ್ಪತ್ರೆಗೆ ಆಗಮಿಸಿ ಮಹಿಳೆಯ ಮನವೊಲಿಸಿ ಇಎಸ್‌ಐ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಿಳೆ ವಾಸವಿದ್ದ ಏರಿಯಾ ಸೀಲ್‌ಡೌನ್ :ಸೋಂಕಿತ ಮಹಿಳೆ ವಾಸವಿದ್ದ ಇಂಗಳಗಿ ಗ್ರಾಮದ ವಾರ್ಡ್ ನಂ.03 ಬಡಾವಣೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಮಹಿಳೆಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಆಟೋಚಾಲಕ ಹಾಗೂ ಮಹಿಳೆ ಮನೆಯವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಮಹಿಳೆಗೆ ಚಿಕಿತ್ಸೆ ಪಡೆದ ಆಸ್ಪತ್ರೆ ಹಾಗೂ ಆಟೋವನ್ನು ಸ್ಯಾನಿಟೈಸ್ ಮಾಡಲಾಗದೆ.