ಕರ್ನಾಟಕ

karnataka

ETV Bharat / city

ಮತ್ತಷ್ಟು ವಸತಿ ಶಾಲೆಗಳನ್ನು ನಿರ್ಮಿಸಲು ಸರ್ಕಾರ ಪಣ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ - Construct various development works

ಕಲಬುರಗಿ ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚಿತ್ತಾಪುರ ತಾಲೂಕಿನ ಹಾಗೂ ವಾಡಿ ಪಟ್ಟಣದ ನ್ಯೂಟೌನ್ ಶಿಪ್​ಗೆ ಮಂಜೂರಾದ ವಿವಿಧ ಕಾಮಗಾರಿ ಹಾಗೂ ನಗರೋತ್ಥಾನ, ಮುರಾಜಿ ದೇಸಾಯಿ ವಸತಿ ಸಾಲೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

Constructs various development works
ನ್ಯೂಟೌನ್​ಶಿಪ್​​ ಮಾದರಿ

By

Published : Jan 10, 2020, 11:01 PM IST

ಕಲಬುರಗಿ:ಏಕಕಾಲಕ್ಕೆ ಇಷ್ಟರ ಮಟ್ಟಿಗೆ ಕಾಮಗಾರಿಗಳು ಉದ್ಘಾಟನೆಯಾಗಿರುವುದು ಇದೇ ಮೊದಲು. ಶಾಸಕ ಪ್ರಿಯಾಂಕ ಖರ್ಗೆ ಅವರು ಬಡಮಕ್ಕಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚಿತ್ತಾಪುರ ತಾಲೂಕಿನ ಹಾಗೂ ವಾಡಿ ಪಟ್ಟಣದ ನ್ಯೂಟೌನ್ ಶಿಪ್​ಗೆ ಮಂಜೂರಾದ ವಿವಿಧ ಕಾಮಗಾರಿಗಳು ಹಾಗೂ ನಗರೋತ್ಥಾನ, ಮುರಾಜಿ ದೇಸಾಯಿ ವಸತಿ ಶಾಲೆ ಕಾಮಗಾರಿಗಳಿಗೆ ಅಡಿಗಲ್ಲು ಹಾಕುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಹೆಚ್ಚು ವಸತಿ ಶಾಲೆಗಳನ್ನು ಹೊಂದಿರುವ ಹೆಗ್ಗಳಿಕೆಗೆ ಕರ್ನಾಟಕಕ್ಕಿದೆ. 820 ವಸತಿ ಶಾಲೆಗಳಲ್ಲಿ 1.20 ಲಕ್ಷ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮತ್ತಷ್ಟು ಶಾಲೆಗಳನ್ನು ನಿರ್ಮಿಸಲು ಚಿಂತನೆ ನಡೆದಿದೆ. ಪ್ರಧಾನಿ ಮೋದಿ ಕೂಡ ಸ್ನಾತಕೋತ್ತರ ವಿದ್ಯಾರ್ಥಿನಿಯರಿಗಾಗಿ ವಸತಿ‌ ಶಾಲೆ ನಿರ್ಮಿಸುವ ಭರವಸೆ ನೀಡಿದ್ದಾರೆ‌ ಎಂದರು.

ವಿವಿಧ ಕಾಮಗಾರಿಗಳಿಗೆ ಚಾಲನೆ

ಶಾಸಕ ಪ್ರಿಯಾಂಕ ಖರ್ಗೆ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ₹ 30 ಕೋಟಿ ಅನುದಾನ ಮೀಸಲಿಟ್ಟಿತ್ತು.ಅದೇ ರೀತಿ ಕೇಂದ್ರ ಸರ್ಕಾರವೂ ಜನರನ್ನು ಮುಖ್ಯ ವಾಹಿನಿಗೆ ತರಲು ಮುಂದಾಗಬೇಕು. ಬುದ್ದ, ಬಸವ, ಅಂಬೇಡ್ಕರ್ ಕನಸಿನಂತೆ ಎಲ್ಲಾ ವರ್ಗದವರಿಗೆ ಗುಣಮಟ್ಟದ ಶಿಕ್ಷಣ ನೀಡುವ ಯೋಜನೆ ಅಸ್ತಿತ್ವಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಚಿತ್ತಾಪುರ ನಾಗವಿ ಕ್ಯಾಂಪಸ್ ಮಾದರಿಯಲ್ಲಿ ವಾಡಿಯ 88 ಎಕರೆಯಲ್ಲಿ ಎಜುಕೇಶನ್ ಹಬ್ ನಿರ್ಮಿಸಲಾಗುತ್ತಿದೆ. ವಾಡಿ ಪಟ್ಟಣವನ್ನು ಅಭಿವೃದ್ಧಿಯತ್ತ ಕೊಂಡ್ಯೊಯಲು ಪ್ರಾಮಾಣಿಕ ಪ್ರಯತ್ನ‌ ನಡೆಸುತ್ತಿದ್ದೇವೆ. ಕಲಬುರಗಿಯಲ್ಲಿ ಐಎಎಸ್, ಕೆಎಎಸ್ ತರಬೇತಿ‌ ಕೇಂದ್ರ ಪ್ರಾರಂಭಿಸುತ್ತಿದ್ದು, ಅದರ ಕಚೇರಿ ತೆರೆಯಲು ಚಿಂತನೆ ನಡೆದಿದೆ.ತೊಗರಿ‌ಗೆ ಬೆಂಬಲ ಬೆಲೆ ₹ 300-500ಕ್ಕೆ ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ABOUT THE AUTHOR

...view details