ಕರ್ನಾಟಕ

karnataka

ಕೋವಿಡ್​​​ 2ನೇ ಅಲೆ, ಮಹಾ ಗಡಿಯಲ್ಲಿ 5 ತಪಾಸಣಾ ಕೇಂದ್ರ ನಿರ್ಮಾಣ: ಡಿಸಿ ವಿ.ವಿ. ಜ್ಯೋತ್ಸ್ನಾ

By

Published : Feb 22, 2021, 4:34 PM IST

ಮಹಾರಾಷ್ಟ್ರ ಗಡಿಯ 5 ಕಡೆಗಳಲ್ಲಿ ಕೋವಿಡ್ ತಪಾಸಣೆ ಕೇಂದ್ರ ಸ್ಥಾಪಿಸಲಾಗಿದೆ. ಆಳಂದ ತಾಲೂಕಿನ ಖಜೂರಿ ಮತ್ತು ಹಿರೋಳ್ಳಿ ಹಾಗೂ ಅಫಜಲಪುರ ತಾಲೂಕಿನ ಮಾಶ್ಯಾಳ, ನಿಂಬಾಳ ಮತ್ತು ಬಳೂರಗಿ ಬಳಿ ತಪಾಸಣೆ ಕೇಂದ್ರಗಳನ್ನು ನಿರ್ಮಿಸಲಾಗಿದೆ.

construction-of-5-checkpoint-at-maharashtra-border
ಡಿಸಿ ವಿವಿ ಜ್ಯೋತ್ಸ್ನಾ

ಕಲಬುರಗಿ: ಕೇರಳ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲೆಯ ಮಹಾರಾಷ್ಟ್ರ ಗಡಿಯಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ‌ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ. ವಿ. ಜ್ಯೋತ್ಸ್ನಾ ತಿಳಿದಿದ್ದಾರೆ.

ಜಿಲ್ಲೆಯ ಮಹಾರಾಷ್ಟ್ರ ಗಡಿಯ 5 ಕಡೆಗಳಲ್ಲಿ ಕೋವಿಡ್ ತಪಾಸಣೆ ಕೇಂದ್ರ ಸ್ಥಾಪಿಸಲಾಗಿದೆ. ಆಳಂದ ತಾಲೂಕಿನ ಖಜೂರಿ ಮತ್ತು ಹಿರೋಳ್ಳಿ ಹಾಗೂ ಅಫಜಲಪುರ ತಾಲೂಕಿನ ಮಾಶ್ಯಾಳ, ನಿಂಬಾಳ ಮತ್ತು ಬಳೂರಗಿ ಬಳಿ ತಪಾಸಣೆ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಬಸ್ ಹಾಗೂ ರೈಲ್ವೆ ನಿಲ್ದಾಣದಲ್ಲೂ ತಪಾಸಣೆ ನಡೆಸಲಾಗುತ್ತಿದೆ. ಕೋವಿಡ್ ಟೆಸ್ಟ್ ನೆಗೆಟಿವ್ ರಿಪೋರ್ಟ್ ಇದ್ರೆ ಮಾತ್ರ ಜಿಲ್ಲೆಗೆ ಪ್ರವೇಶಲು ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕೋವಿಡ್​​​ 2ನೇ ಅಲೆ, ಮಹಾ ಗಡಿಯಲ್ಲಿ 5 ತಪಾಸಣಾ ಕೇಂದ್ರ ನಿರ್ಮಾಣ

ಈಗಾಗಲೇ ಜಿಲ್ಲೆಗೆ ಕೇರಳ ಮತ್ತು ಮಹಾರಾಷ್ಟ್ರದಿಂದ ಆಗಮಿಸಿದವರು ಆರ್​ಟಿಪಿಸಿಆರ್ ತಪಾಸಣೆ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಸಮಾರಂಭಗಳಲ್ಲಿ ಅತಿ ಹೆಚ್ವು ಜನ ಸೇರದಿರಿ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ ಮಾರ್ಗಸೂಚಿಗಳನ್ನ ಪಾಲಿಸಿ ಹಾಗೂ ಸಭೆ ಸಮಾರಂಭಗಳಲ್ಲಿ 500ಹೆಚ್ಚು ಜನ ಸೇರಿದಂತೆ ಡಿಸಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details