ಕಲಬುರಗಿ: ಕೊರೊನಾ ಸೋಂಕಿಗೆ ವಾಡಿ ಪುರಸಭೆ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡ ಹಾಗೂ ಭೋವಿ ಸಮಾಜದ ಹಿರಿಯ ನಾಯಕ ತಿಮ್ಮಯ್ಯ ಪವಾರ್ ಸಾವನ್ನಪ್ಪಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡ ತಿಮ್ಮಯ್ಯ ಪವಾರ್ ಕೊರೊನಾಗೆ ಬಲಿ - ಕೊರೊನಾದಿಂದ ತಿಮ್ಮಯ್ಯ ಸಾವು
ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕಲಬುರಗಿ ಕೋವಿಡ್ ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಇಂದು ಪವಾರ್ ಸಾವನಪ್ಪಿದ್ದಾರೆ.
ಕೊರೊನಾ
ತೀವ್ರ ಉಸಿರಾಟ ಸಮಸ್ಯೆಯಿಂದ ಬಳತ್ತಿದ್ದ ಅವರನ್ನು ಕಲಬುರಗಿ ಕೋವಿಡ್ ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಇಂದು ಪವಾರ್ ಸಾವನಪ್ಪಿದ್ದಾರೆ. ಕಳೆದ ಆರು ತಿಂಗಳ ಹಿಂದೆಯಷ್ಟೆ ವಾಡಿ ಪುರಸಭೆಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು ವಾಡಿ ಪಟ್ಟಣದ ಅಭಿವೃದ್ಧಿ ಶ್ರಮಿಸಿದ್ದರು.
ಅವರ ಅಗಲಿಕೆಯಿಂದಾಗಿ ವಾಡಿ ಕಾಂಗ್ರೆಸ್ ಪಾಳಯದಲ್ಲಿ ನೀರವ ಮೌನ ಆವರಿಸಿದೆ. ಪವರ್ ನಿಧನದಿಂದಾಗಿ ಭೋವಿ ಸಮಾಜ ಕೊಂಡಿಯೊಂದು ಕಳಚಿದಂತಾಗಿದೆ. ಪವಾರ್ ಅವರು ಪತ್ನಿ ಮಕ್ಕಳು ಸೇರಿ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.