ಕರ್ನಾಟಕ

karnataka

ETV Bharat / city

ಬಿಜೆಪಿ ಎನ್ನುವ ವೈರಸ್​​ಗೆ ಕಾಂಗ್ರೆಸ್ ವ್ಯಾಕ್ಸಿನ್: ಪ್ರಿಯಾಂಕ್ ಖರ್ಗೆ ವ್ಯಂಗ್ಯ - ಸಿಎಂ ಇಬ್ರಾಹಿಂ ಹೇಳಿಕೆಗೆ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ತಿರುಗೇಟು

ದೇಶದ ಎಲ್ಲ ಸಮಸ್ಯೆಗಳಿಗೂ ಕಾಂಗ್ರೆಸ್ ವ್ಯಾಕ್ಸಿನ್ ಇದ್ದಂತೆ. ಯಾರು ಪಕ್ಷ ಬಿಡುವ ಮಾತು ಹೇಳಿದ್ದಾರೋ ಅವರಿಗೆ ಬೂಸ್ಟರ್​​ ಡೋಸ್ ಬೇಕಾಗಿದೆ. ಬಿಜೆಪಿ ಎನ್ನುವ ವೈರಸ್​ಗೆ ಕಾಂಗ್ರೆಸ್ ವ್ಯಾಕ್ಸಿನ್ ಇದ್ದ ಹಾಗೆ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

Priyank Kharge
ಕಲಬುರಗಿಯಲ್ಲಿ ಮಾಧ್ಯಮವರೊಂದಿಗೆ ಪ್ರಿಯಾಂಕ್ ಖರ್ಗೆ

By

Published : Jan 27, 2022, 1:18 PM IST

ಕಲಬುರಗಿ:ಬಿಜೆಪಿ ಎನ್ನುವ ವೈರಸ್​​ಗೆ ಒಂದೇ ಒಂದು ವ್ಯಾಕ್ಸಿನ್ ಅಂದ್ರೆ ಅದು ಕಾಂಗ್ರೆಸ್ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಿಎಂ ಇಬ್ರಾಹಿಂ ಹೇಳಿಕೆಗೆ ತಿರುಗೇಟು ನೀಡಿದರು

ಕಲಬುರಗಿಯಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​ಗೆ ಕೊರೊನಾ ಬಂದಿದೆ ಎನ್ನುವ ಸಿಎಂ ಇಬ್ರಾಹಿಂ ಹೇಳಿಕೆಗೆ ವ್ಯಂಗ್ಯವಾಡಿದ ಖರ್ಗೆ, ದೇಶದ ಎಲ್ಲ ಸಮಸ್ಯೆಗಳಿಗೂ ಕಾಂಗ್ರೆಸ್ ವ್ಯಾಕ್ಸಿನ್ ಇದ್ದಂತೆ.

ಯಾರು ಪಕ್ಷ ಬಿಡುವ ಮಾತು ಹೇಳಿದ್ದಾರೋ ಅವರಿಗೆ ಬೂಸ್ಟರ್​​ ಡೋಸ್ ಬೇಕಾಗಿದೆ. ಬಿಜೆಪಿ ಎನ್ನುವ ವೈರಸ್​ಗೆ ಕಾಂಗ್ರೆಸ್ ವ್ಯಾಕ್ಸಿನ್ ಇದ್ದ ಹಾಗೆ. ಕಾಂಗ್ರೆಸ್​ನಿಂದ ಮಾತ್ರ ದೇಶದ ಎಲ್ಲ ಸಮಸ್ಯೆಗೆ ಪರಿಹಾರ ಸಾಧ್ಯ. ಬಡತನಕ್ಕೂ ಕಾಂಗ್ರೆಸ್ ವ್ಯಾಕ್ಸಿನ್ ಬೇಕು, ರೈತರಿಗೂ ಕಾಂಗ್ರೆಸ್ ವ್ಯಾಕ್ಸಿನ್ ಬೇಕು, ಕಾರ್ಮಿಕರ, ಮಹಿಳೆಯರ ಸುರಕ್ಷತೆಗೂ ನಮ್ಮದೇ ವ್ಯಾಕ್ಸಿನ್ ಬೇಕು ಎಂದರು.

ಕಲಬುರಗಿಯಲ್ಲಿ ಮಾಧ್ಯಮವರೊಂದಿಗೆ ಪ್ರಿಯಾಂಕ್ ಖರ್ಗೆ

ಪಕ್ಷ ತೊರೆಯುವ ಕುರಿತ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಆ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇಲ್ಲ. ಯಾರು ಎಲ್ಲಿಗೆ ಹೋಗಲಿ ಪಕ್ಷ ಏನು ಕುಸಿದು ಹೋಗುತ್ತಾ..? ಜೆಡಿಎಸ್ ಜೊತೆ ಹೋಗಲು ರೆಡಿ ಆಗಿದ್ರೆ ಅದು ಅವರಿಗೆ ಬಿಟ್ಟ ವಿಚಾರ ಎಂದರು.

ಇದನ್ನೂ ಓದಿ: ಮೋದಿಯಂತಹ ಒಳ್ಳೆಯ ಸೇಬು ಬಿಟ್ಟು, ಕೊಳೆತ ಮಾವಿನಂತಿರುವ ಕಾಂಗ್ರೆಸ್​ಗೆ ಯಾರಾದ್ರೂ ಹೋಗ್ತಾರಾ? ಸಚಿವ ಈಶ್ವರಪ್ಪ

ಕಾಂಗ್ರೆಸ್ ಎವರ್ ಗ್ರೀನ್ ಎವರ್ ಫ್ರೆಶ್ :ಕಾಂಗ್ರೆಸ್ ಕೊಳೆತ ಮಾವು, ಮೋದಿ ಫ್ರೆಶ್ ಆ್ಯಪಲ್​ ಎಂದಿದ್ದ ಸಚಿವ ಈಶ್ವರಪ್ಪ ವಿರುದ್ಧ ಶಾಸಕ ಪ್ರೀಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದು ಯಾಕೆ? ಯಡಿಯೂರಪ್ಪ ಕೊಳೆತ ಹಣ್ಣು ಅಂತಾನೆ ಬದಲಾಯಿಸಿದ್ರಾ ? ಈಗ ಬೊಮ್ಮಾಯಿ ಸಹ ಕೊಳೆತ ಹಣ್ಣು ಅಂತ ಬದಲಾಯಿಸಲು ಮುಂದಾಗ್ತಿದ್ದೀರಾ. ಹಾಗಾದ್ರೆ , ರಾಜ್ಯದಲ್ಲಿ ಬಿಜೆಪಿ ಆಡಳಿತ ಕೊಳೆತಿದೆಯಾ ? ಎಂದು ಪ್ರಶ್ನಿಸಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ನನ್ನ ಲೆಟರ್​ಗೆ ಕಿಮ್ಮತ್ತಿಲ್ಲ ಎಂದಿದ್ದಾರೆ‌. ಇದನೆಲ್ಲ ಗಮನಿಸಿದರೆ ಬಿಜೆಪಿ ಆಡಳಿತ ಸರಿಯಿಲ್ಲ ಎಂದು ಬಿಜೆಪಿಯವರೇ ಒಪ್ಪಿಕೊಂಡಂತೆ ಅಲ್ವಾ? ಕಾಂಗ್ರೆಸ್ ಕೊಳೆತ ಹಣ್ಣು ಅಲ್ಲ ಎವರ್ ಗ್ರೀನ್ ಎವರ್ ಫ್ರೆಶ್. ಇತ್ತೀಚಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಂದಿದೆ. ಯಾರು ಕೊಳೆತ ಹಣ್ಣು, ಯಾರು ಫ್ರೆಶ್ ಎನ್ನುವುದು ಚುನಾವಣೆ ಬರಲಿ ಗೊತ್ತಾಗುತ್ತೆ ಎಂದು ಈಶ್ವರಪ್ಪನವರಿಗೆ ಖರ್ಗೆ ಸವಾಲು ಹಾಕಿದ್ದಾರೆ‌.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details