ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ಮತ್ತಷ್ಟು ಚುರುಕುಗೊಳಿಸಿದೆ. ಪಿಎಸ್ಐ ಪರೀಕ್ಷೆ ಬರೆದ 50 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ಜಾರಿ ಮಾಡಿದೆ.
ಓಎಂಆರ್ ಶೀಟ್ನಲ್ಲಿ ಕಡಿಮೆ ಅಂಕದ ಉತ್ತರ ಬರೆದರೂ ಕೂಡ ನಂತರ ಅಕ್ರಮದ ಮೂಲಕ ಸರಿಯಾದ ಉತ್ತರಗಳನ್ನು ತುಂಬಿ ಹೆಚ್ಚಿನ ಅಂಕ ಪಡೆಯುವ ಮೂಲಕ ಪಿಎಸ್ಐ ಹುದ್ದೆಗೆ ನೇಮಕವಾಗಿರುವುದು ಸಿಐಡಿ ತನಿಖೆಯಿಂದ ಬಯಲಾದ ಹಿನ್ನೆಲೆ ಪರೀಕ್ಷೆ ಬರೆದ ಇನ್ನೂ 50 ಅಭ್ಯರ್ಥಿಗಳನ್ನು ಹೆಚ್ಚಿನ ವಿಚಾರಣೆ ನಡೆಸಲು ಸಿಐಡಿ ಮುಂದಾಗಿದೆ. ಈ ಮೂಲಕ ಅಕ್ರಮದಲ್ಲಿ ಪಾಲ್ಗೊಂಡ ಮತ್ತಷ್ಟು ಅಭ್ಯರ್ಥಿಗಳ ಪತ್ತೆ ಕಾರ್ಯಕ್ಕೆ ಮುಂದಾಗಿದೆ.