ಕಲಬುರಗಿ: ಮಿರ್ಚಿ ಬಜ್ಜಿ ವಿಷಯಕ್ಕೆ ಆರಂಭಗೊಂಡ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ.
ಮಿರ್ಚಿ ಬಜ್ಜಿ ತಂದಿಟ್ಟ ಜಗಳ: ಜ್ಯೋತಿಷಿ ಕೊಲೆಯಲ್ಲಿ ಅಂತ್ಯ - ಚಿತ್ತಾಪೂರ ಹಲಕರ್ಟಿ ಜ್ಯೋತಿಷಿ ಹತ್ಯೆ
ಮಿರ್ಚಿ ಬಜ್ಜಿ ವಿಚಾರಕ್ಕೆ ಇಬ್ಬರು ವ್ಯಕ್ತಿಗಳು ಜಗಳ ಸಾವಲ್ಲಿ ಅಂತ್ಯವಾದ ಘಟನೆ ಕಲಬುರಗಿಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಜರುಗಿದೆ. ಈ ಕುರಿತು ವಾಡಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಹಲಕರ್ಟಿ ಗ್ರಾಮದ ಸುರೇಶ ಜೋಶಿ (58) ಕೊಲೆಯಾದ ನತದೃಷ್ಟ. ಜ್ಯೋತಿಷಿಯಾಗಿದ್ದ ಸುರೇಶ ಇಂದು ಬೆಳಗ್ಗೆಯಷ್ಟೆ ರಾಜ್‌ಕೋಟದಿಂದ ಸ್ವಗ್ರಾಮ ಹಲಕರ್ಟಿಗೆ ಮರಳಿದ್ದ. ಸಾಯಂಕಾಲದ ಹೊತ್ತಿಗೆ ಗ್ರಾಮದ ಹೊಟೇಲ್ ಬಳಿ ಕುಳಿತಾಗ, ಇದೆ ವೇಳೆ ಹೊಟೇಲ್ಗೆ ಆಗಮಿಸಿದ ಪಾಶಾ ಎಂಬಾತ ಹೊಟೇಲ್ನಲ್ಲಿ ಇಡಲಾಗಿದ್ದ ಮಿರ್ಚಿ ಬಜ್ಜಿಗೆ ಕೈಹಾಕಿ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ.
ಇದೆ ಕ್ಷುಲಕ ವಿಷಯಕ್ಕೆ ಪಾಶಾ ಹಾಗೂ ಸುರೇಶ ಜೋಶಿ ನಡುವೆ ಜಗಳ ಆರಂಭಗೊಂಡಿದೆ. ಜಗಳ ವಿಕೋಪಕ್ಕೆ ತಿರುಗಿ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ ನೆಲಕ್ಕೆ ತಳ್ಳಿದಾಗ ಕೆಳಗೆ ಬಿದ್ದು ಸುರೇಶ ಜೋಶಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಈ ಕುರಿತು ವಾಡಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.