ಕಲಬುರಗಿ:ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಇಂದು ಹಿಂದುಳಿದ ವರ್ಗ ಇಲಾಖೆಯಿಂದ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳ ಕುರಿತು ಹೆಚ್ಚು ಚರ್ಚೆ ನಡೆಯಿತು.
ಹೀರಾಪುರ ಬಳಿ ನರ್ಸಿಂಗ್ ಹಾಸ್ಟೆಲ್ ಕಳಪೆ ಕಾಮಗಾರಿ ಎಂಬ ಆರೋಪದಡಿ ಕಾರ್ಯನಿರ್ವಾಹಕ ಇಂಜಿನಿಯರ್ ಧನುಕುಮಾರ್ ಮತ್ತು ಎಇಇ ಎಲ್.ಜೆ.ಪಾಟೀಲ್ ವಿರುದ್ಧ ದಾಖಲಿಸಲಾಗಿದೆ.
ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಪ್ರಕರಣ ದಾಖಲಿಸಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾಯತ್ ಪ್ರತಿಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ಅಧಿಕಾರಿಗಳ ವಿರುದ್ಧ ಅಸಮಾಧಾನ ಕೂಡಾ ಇದೇ ವೇಳೆ ವ್ಯಕ್ತವಾಯಿತು.
ಈ ಹಿಂದಿನ ಅಧಿಕಾರಿಗಳು ಕಳಪೆ ಕಾಮಗಾರಿ ಮಾಡಿದ್ದಾರೆ. ಆದರೆ, ಹಾಲಿ ಅಧಿಕಾರಿಗಳು ವಿರುದ್ಧ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು. ನ್ಯಾಯಾಲಯಕ್ಕೆ ಸೂಕ್ತ ದಾಖಲಾತಿ ಸಲ್ಲಿಸುವುದಾಗಿ ಸಿಇಒ ಪಿ.ರಾಜ ಅವರು ಸ್ಪಷ್ಟನೆ ನೀಡಿದರು.