ಕಲಬುರಗಿ:ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಸಾವಳಗಿ ಕ್ರಾಸ್ ಬಳಿ ಸಂಭವಿಸಿದೆ.
ಕಲಬುರಗಿ ಬಳಿ ಭೀಕರ ಅಪಘಾತ: ಇಬ್ಬರು ಮಕ್ಕಳು ಸೇರಿ ಐವರು ದುರ್ಮರಣ - ಸ್ಕಾರ್ಪಿಯೋ ಡಿಕ್ಕಿ
ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಅಪಘಾತ ಕಲಬುರಗಿ ತಾಲೂಕಿನ ಸಾವಳಗಿ ಕ್ರಾಸ್ ಬಳಿ ನಡೆದಿದೆ.
5 died on spot
ಸೋಲಾಪುರ ಮೂಲದ ಸಂಜಯ್ ಚಡಚಣ್ (29), ರಾಣಿ ಚಡಚಣ್(26), ಶ್ರೇಯಸ್(3), ಭಾಗ್ಯಶ್ರೀ (22) ಮತ್ತು ಧೀರಜ್(2) ಮೃತರು.
ತಿರುಪತಿಯಿಂದ ಸೋಲಾಪುರಕ್ಕೆ ವಾಪಸಾಗುವ ವೇಳೆ ತಡರಾತ್ರಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಉಳಿದಂತೆ ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.