ಕರ್ನಾಟಕ

karnataka

ETV Bharat / city

ಶಾಸಕರ ಸಂಬಂಧಿ ಆದ ಮಾತ್ರಕ್ಕೆ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಷಣ ಮಾಡಬಹುದಾ? - ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್

ಸರ್ಕಾರಿ ಕಚೇರಿಯಲ್ಲಿ ಸ್ವಾತ್ರಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸಂಸದ ಉಮೇಶ್ ಜಾಧವ್ ಸಹೋದರ ರಾಮಚಂದ್ರ ಜಾಧವ್ ಭಾಷಣ ಮಾಡಿರುವ ಬಗ್ಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ್ ಖರ್ಗೆ

By

Published : Aug 15, 2019, 8:19 PM IST

ಕಲಬುರಗಿ: ಸರ್ಕಾರಿ ಕಚೇರಿಯಲ್ಲಿ ಸ್ವಾತ್ರಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸಂಸದ ಉಮೇಶ್ ಜಾಧವ್ ಸಹೋದರ ರಾಮಚಂದ್ರ ಜಾಧವ್ ಭಾಷಣ ಮಾಡಿರುವ ಬಗ್ಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್

ಬಿಜೆಪಿ ಸರ್ಕಾರ ಇಂದು ಇತಿಹಾಸ ನಿರ್ಮಿಸಿದೆ. ಸ್ವಯಂಘೋಷಿತ ರಾಷ್ಟ್ರೀಯವಾದಿಗಳು ತ್ರಿವರ್ಣ ಧ್ವಜವನ್ನು ಜಿಲ್ಲಾ ಪ್ರಧಾನ ಕಚೇರಿಯಲ್ಲಿ ತಮ್ಮ ಸಚಿವರ ಮೂಲಕ ಹಾರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ.

ಇನ್ನು ರಾಮಚಂದ್ರ ಜಾಧವ್ ದ್ವಜಾರೋಹಣದ ಸಂದರ್ಭದಲ್ಲಿ ಭಾಷಣ ಮಾಡಿದ್ದಕ್ಕೆ ಶಾಸಕರ ಚಿಕ್ಕಪ್ಪ ಅಥವಾ ಸಂಸದರ ಸಹೋದರ ಆದ ಮಾತ್ರಕ್ಕೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಬಹುದಾ ಎಂದು ಖಾರವಾದ ಪ್ರಶ್ನಿಸಿದ್ದಾರೆ.

ABOUT THE AUTHOR

...view details